Select Your Language

Notifications

webdunia
webdunia
webdunia
webdunia

ವಾರಾಣಸಿ: 65ರ ಫ್ರೆಂಚ್ ಮಹಿಳೆ ಮೇಲೆ ವಾಚ್ ಮೆನ್ ನಿಂದಲೇ ಅತ್ಯಾಚಾರ

ವಾರಾಣಸಿ: 65ರ ಫ್ರೆಂಚ್ ಮಹಿಳೆ ಮೇಲೆ ವಾಚ್ ಮೆನ್ ನಿಂದಲೇ ಅತ್ಯಾಚಾರ
ವಾರಾಣಸಿ , ಶುಕ್ರವಾರ, 30 ಜೂನ್ 2017 (13:18 IST)
ವಾರಾಣಸಿ : ಬಾಡಿಗೆ ಮನೆಯೊಂದರಲ್ಲಿ ಕಳೆದ ಒಂದು ವರ್ಷದಿಂದ ವಾಸವಾಗಿದ್ದ 65ರ ಫ್ರೆಂಚ್‌ ಸಮಾಜಸೇವಾ ಕಾರ್ಯಕರ್ತೆಯನ್ನು ಮನೆಯ ವಾಚ್‌ಮನ್‌ ರೇಪ್‌ ಮಾಡಿರುವ ಘಟನೆ ಉತ್ತರಪ್ರದೇಶದ ವಾರಾಣಸಿಯಲ್ಲಿ ನಡೆದಿದೆ.
 
ಶೂಲತಾನಕೇಶ್ವರ ಪ್ರದೇಶದಲ್ಲಿ ಸಂತ್ರಸ್ತೆಯು ವಾಸವಾಗಿದ್ದ ಕಟ್ಟಡದಲ್ಲಿ ಕೆಲಸ ಮಾಡಿಕೊಂಡಿದ್ದ ವಾಚ್‌ ಮನ್‌ ಓಂ ಪ್ರಕಾಶ್‌, ರಾತ್ರಿ ಫ್ರೆಂಚ್‌ ಮಹಿಳೆಯು ಮಲಗಿಕೊಂಡಿದ್ದಾಗ ಆಕೆಯ ಕೋಣೆಯನ್ನು ಪ್ರವೇಶಿಸಿ, ಅತ್ಯಾಚಾರವೆಸಗಿದ್ದಾನೆ. ಆಕೆ ಪ್ರತಿರೋಧಿಸಿದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಅತ್ಯಾಚಾರದ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
 
ಆರೋಪಿ ವಾಚ್‌ ಮನ್‌ ಓಂ ಪ್ರಕಾಶ್‌ ಘಟನೆ ಬಳಿಕ ಮಿರ್ಜಾಪುರ ಜಿಲ್ಲೆಯಲ್ಲಿನ ತನ್ನ ಸಹೋದರನ ಮನೆಗೆ ತೆರಳಿದ್ದ. ಅಲ್ಲಿಂದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಸಂತ್ರಸ್ತ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

4 ಕೋಟಿ ರೂ. ಇನ್ಸೂರೆನ್ಸ್ ಹಣಕ್ಕಾಗಿ ಬೃಹನ್ನಾಟಕ.. ಬದುಕಿದ್ದರೂ ಸತ್ತಿದ್ದೇನೆಂದು ತೋರಿಸಿದ್ದ..!