ಬೆಂಗಳೂರು : ಸ್ಮಾರ್ಟ್ ಫೋನ್ ಕಾರ್ಯಚರಣೆಯ ವೇಗ ಹೆಚ್ಚಿಸುವ ಭರವಸೆ ನೀಡುವ ಮೂಲಕ ಬಳಕೆದಾರರನ್ನು ವಂಚಿಸಲು ಹ್ಯಾಕರ್ ಗಳು ಈ ನಕಲಿ ಆ್ಯಪ್ ಗಳನ್ನು ಪ್ಲೇಸ್ಟೋರ್ ಗೆ ಬಿಟ್ಟಿದ್ದಾರೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಯಾವುದೇ ಆ್ಯಪ್ ಪ್ಲೇಸ್ಟೋರ್ ಗೆ ಬರುವ ಮೊದಲು ಗೂಗಲ್ ಅದನ್ನು ಪರಿಶೀಲಿಸಿ ನಂತರ ಪ್ಲೇಸ್ಟೋರ್ ಗೆ ಕಾಲಿಡಲು ಅವಕಾಶ ನೀಡುತ್ತದೆ. ಆದರೆ ಹ್ಯಾಕರ್ ಗಳು ಗೂಗಲ್ ನ ಕಣ್ಣು ತಪ್ಪಿಸಿ ಪ್ಲೇಸ್ಟೋರ್ ಗೆ ಆ್ಯಪ್ ಗಳನ್ನು ಹಾಕುತ್ತಿದ್ದಾರೆ.
ಸೆಲ್ಫಿ ಕ್ಯಾಮೆರಾ, ಟೋಟಲ್ ಕ್ಲೀನರ್, ಸ್ಮಾರ್ಟ್ ಕೂಲರ್, ರ್ಯಾಮ್ ಮಾಸ್ಟರ್ ಆ್ಯಪ್ಗಳು ಬಳಕೆದಾರನ ಮಾಹಿತಿಯನ್ನು ಕಸಿದುಕೊಳ್ಳುತ್ತಿದೆ ಎಂಬುದಾಗಿ ತಿಳಿದುಬಂದಿದೆ. ಈ ಆ್ಯಪ್ ಗಳನ್ನು ಇನ್ ಸ್ಟಾಲ್ ಮಾಡಿಕೊಂಡ ಬಳಿಕ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಬಳಕೆದಾರ ಗಮನಿಸದೆ ಆ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿದಾಗ ಹ್ಯಾಕರ್ ಗಳಿಗೆ ನಿಮ್ಮ ಮೊಬೈಲ್ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗುತ್ತದೆ ಎಂದು ಇತ್ತೀಚಿನ ಅಧ್ಯಯನದ ಮೂಲಕ ಸಾಬೀತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.