ನವದೆಹಲಿ: ದೇಶದ ಜನತೆಗೆ ಮೋದಿ ಸರ್ಕಾರ ಜಿಎಸ್ ಟಿ ಬಂಪರ್ ಕೊಡುಗೆ ನೀಡಿದೆ. ಜಿಎಸ್ ಟಿ ಪರಿಷ್ಕರಣೆಯಿಂದ ಕೃಷಿಕರಿಗೆ ಏನು ಲಾಭ, ಯಾವುದೆಲ್ಲಾ ಅಗ್ಗ ಇಲ್ಲಿದೆ ವಿವರ.
ಜಿಎಸ್ ಟಿ ಪರಿಷ್ಕರಣೆಯಿಂದ ಕೃಷಿಕರಿಗೂ ಲಾಭವಾಗಲಿದೆ. ಕೃಷಿಗೆ ಅಗತ್ಯವಾದ ವಸ್ತುಗಳ ಬೆಲೆಯೂ ಕೊಂಚ ಕಡಿಮೆಯಾಗಲಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಲಾಭ ನೀಡಲಾಗಿದೆ. ಕೃಷಿ ಸಲಕರಣೆಗಳು, ಕೀಟನಾಶಕಗಳ ಜಿಎಸ್ ಟಿಯಲ್ಲಿ ಕಡಿತವಾಗಿದೆ. ಉಳಿದ ವಿವರಗಳು ಇಲ್ಲಿದೆ ನೋಡಿ.
ಟ್ರ್ಯಾಕ್ಟರ್ ಗಳು, ಟ್ರ್ಯಾಕ್ಟರ್ ನ ಟೈರ್ ಮತ್ತು ಇತರೆ ಬಿಡಿ ಭಾಗಗಳ ಜಿಎಸ್ ಟಿ ಈ ಮೊದಲು ಶೇ.18 ರಷ್ಟಿತ್ತು. ಈಗ ಇದು ಶೇ.5 ಕ್ಕೆ ಇಳಿಕೆಯಾಗಿದೆ. ನಿರ್ದಿಷ್ಟ ಜೈವಿಕ ಕೀಟನಾಶಕಗಳು, ಸೂಕ್ಷ್ಮ ಪೋಷಕಾಂಶಗಳು, ಹನಿ ನೀರಾವರಿ ವ್ಯವಸ್ಥೆ ಮತ್ತು ಸ್ಪಿಂಕ್ಲರ್ ಗಳು, ಮಣ್ಣು ಹದಗೊಳಿಸುವ, ಸಾಗುವಳಿ, ಕೊಯ್ಲು, ಥ್ರೆಶಿಂಗ್ ಮತ್ತಿತರ ಕೃಷಿ, ತೋಟಗಾರಿಕೆ ಯಂತ್ರಗಳ ಮೇಲಿನ ಜಿಎಸ್ ಟಿ ಈ ಮೊದಲು ಶೇ.12 ರಷ್ಟಿತ್ತು. ಇದೀಗ ಈ ಎಲ್ಲಾ ವಸ್ತುಗಳ ಜಿಎಸ್ ಟಿ ಶೇ.5 ಕ್ಕೆ ಕಡಿತವಾಗಿದೆ.
ಉದಾಹರಣೆಗೆ ಇದುವರೆಗೆ 1 ಲಕ್ಷ ರೂ.ಗಳ ಕೃಷಿ ಸಲಕರಣೆ ಖರೀದಿಸುವಾಗ 12 ಸಾವಿರ ರೂ. ಜಿಎಸ್ ಟಿ ಕಟ್ಟಬೇಕಾಗಿತ್ತು. ಆದರೆ ಈಗ 5,000 ರೂ. ಪಾವತಿಸಿದರೆ ಸಾಕು. ಹೀಗಾಗಿ ಅಷ್ಟರಮಟ್ಟಿಗೆ ಬೆಲೆ ಕಡಿಮೆಯಾಗಲಿದೆ. ಇದು ಗ್ರಾಹಕರಿಗೆ ಲಾಭವಾಗಲಿದೆ.