Publish Date: Wed, 05 Nov 2025 (11:11 IST)
Updated Date: Wed, 05 Nov 2025 (11:14 IST)
ಬೆಂಗಳೂರು: ವಾರದ ಆರಂಭದಲ್ಲೇ ಚಿನ್ನದ ದರ ಏರಿಕೆ ಸೂಚಿಸುತ್ತಿದೆ. ಪರಿಶುದ್ಧ ಚಿನ್ನದ ದರ ಮತ್ತು 18,22, 24 ಕ್ಯಾರೆಟ್ ಚಿನ್ನದ ದರ ಇಂದು ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಕಳೆದ ವಾರ ಪರಿಶುದ್ಧ ಚಿನ್ನದ ದರ ಸತತ ಇಳಿಕೆ ಕಂಡಿತ್ತು. ಹಬ್ಬ ಮುಗಿದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿತ್ತು. ಆದರೆ ಮೊನ್ನೆ ಪರಿಶುದ್ಧ ಚಿನ್ನದ ದರ ಕೊಂಚ ಏರಿಕೆಯಾಗಿತ್ತು. ನಿನ್ನೆ ಪರಿಶುದ್ಧ ಚಿನ್ನದ ದರ 1,24,895.00 ರೂ.ಗಳಿತ್ತು. ಇಂದು ಮತ್ತೆ ಇಳಿಕೆಯಾಗಿದ್ದು 1,24,390.00 ರೂ.ಗಳಷ್ಟಾಗಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 98 ರೂ. ಇಳಿಕೆಯಾಗಿದ್ದು 12,148 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 90 ರೂ. ಇಳಿಕೆಯಾಗಿದ್ದು 11,135 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಪ್ರತೀ ಗ್ರಾಂ.ಗೆ 73 ರೂ. ಇಳಿಕೆಯಾಗಿದ್ದು 9,111 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರ ಕಳೆದ ವಾರ ಇಳಿಕೆಯತ್ತ ಸಾಗಿತ್ತು. ಈ ವಾರದ ಆರಂಭದಲ್ಲೇ ಮತ್ತೆ ಬೆಳ್ಳಿ ದರ ಇಳಿಕೆಯತ್ತ ಸಾಗಿದೆ. ಇಂದು ಪ್ರತೀ ಕೆ.ಜಿಗೆ ಬೆಳ್ಳಿ ದರ 1,50,500 ರೂ. ಗಳಷ್ಟಿದೆ.