Daily Horoscope

Select Your Language

Notifications

webdunia
webdunia
webdunia
webdunia

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Gold
ಬೆಂಗಳೂರು: ವಾರದ ಆರಂಭದಲ್ಲೇ ಚಿನ್ನದ ಬೆಲೆ ಭಾರೀ ಏರಿಕೆಯಾಗಿದ್ದು ಗ್ರಾಹಕರಿಗೆ ಶಾಕ್ ತರುವಂತಿದೆ. ಆಷಾಢ ಮಾಸದ ಹಬ್ಬದ ಸಂದರ್ಭದಲ್ಲೇ ಚಿನ್ನದ ದರವೂ ಗಗನಕ್ಕೇರಿದೆ.  ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರದಲ್ಲಿ ಇಂದು ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಕಳೆದ ವಾರವಿಡೀ ಚಿನ್ನದ ದರ ಏರಿಳಿಕೆಯಾಗುತ್ತಲೇ ಇತ್ತು. ಇಂದೂ ಪರಿಶುದ್ಧ ಚಿನ್ನ ಮತ್ತು ಇತರೆ ಚಿನ್ನದ ದರದಲ್ಲಿ ಏರಿಕೆಯಾಗಿದೆ. ಅದರಲ್ಲೂ ಪರಿಶುದ್ಧ ಚಿನ್ನದ ದರವಂತೂ ಭಾರೀ ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ಮೊನ್ನೆ 1,01,785.00 ರೂ.ಗಳಷ್ಟಿತ್ತು. ಆದರೆ ಇಂದು ಮತ್ತೆ ಏರಿಕೆ ಕಂಡಿದ್ದು, 1,02,605.00   ರೂ.ಗಳಾಗಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 5 ರೂ. ಏರಿಕೆಯಾಗಿದ್ದು 10,140 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 5 ರೂ. ಏರಿಕೆಯಾಗಿದ್ದು 9,925 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 4 ರೂ. ಏರಿಕೆಯಾಗಿದ್ದು 7,605 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರ ವಾರಂತ್ಯಕ್ಕೆ ಯಥಾಸ್ಥಿತಿಯಲ್ಲಿತ್ತು. ಇಂದೂ ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇಂದೂ ಬೆಳ್ಳಿ ದರ ಪ್ರತಿ ಕೆ.ಜಿ.ಗೆ 1,13, 000 ರೂ. ಗಳಷ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಹೆಸರು ವೋಟರ್ ಲಿಸ್ಟ್ ನಲ್ಲಿಲ್ಲ ಎಂದು ಸುಳ್ಳು ಹೇಳಿದ್ರಾ ತೇಜಸ್ವಿ ಯಾದವ್