Daily Horoscope

Select Your Language

Notifications

webdunia
webdunia
webdunia
webdunia

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

Gold
ಬೆಂಗಳೂರು: ಸತತ ಏರಿಕೆಯ ನಂತರ ಚಿನ್ನದ ದರ ಇಂದು ಇಳಿಕೆಯಾಗಿದ್ದು ಗ್ರಾಹಕರಿಗೆ ನೆಮ್ಮದಿ ತಂದಿದೆ. ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರದಲ್ಲಿ ಇಂದು ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ನಿನ್ನೆ ಪರಿಶುದ್ಧ ಚಿನ್ನದ ದರ ಭಾರೀ ಏರಿಕೆಯಾಗಿತ್ತು. ಆದರೆ ಇಂದು ಮತ್ತೆ ದರ ಕೊಂಚ ಇಳಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ಮಾತ್ರವಲ್ಲ ಇತರೆ ಚಿನ್ನದ ದರವೂ ಇಂದು ಕೊಂಚ ಇಳಿಕೆಯಾಗಿದೆ. ಇದರೊಂದಿಗೆ ಏರಿಕೆ-ಇಳಿಕೆಯ ಕಣ್ಣಾಮುಚ್ಚಾಲೆ ಮುಂದುವರಿದಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,02,350.00 ರೂ.ಗಳಷ್ಟಿತ್ತು. ಆದರೆ ಇಂದು ಮತ್ತೆ ಏರಿಕೆ ಕಂಡಿದ್ದು, 1,01,650.00   ರೂ.ಗಳಾಗಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 21 ರೂ. ಇಳಿಕೆಯಾಗಿದ್ದು 09,982 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 20 ರೂ. ಇಳಿಕೆಯಾಗಿದ್ದು 9,150 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 16 ರೂ. ಏರಿಕೆಯಾಗಿದ್ದು 7,487 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರ ಮೊನ್ನೆ ಕೊಂಚ ಏರಿಕೆಯಾಗಿತ್ತು. ಆದರೆ ಇಂದು ಮತ್ತೆ ಕೊಂಚ ಇಳಿಕೆಯಾಗಿದೆ. ಇಂದು ಪ್ರತೀ ಕೆ.ಜಿ ಬೆಳ್ಳಿ ದರ 2,000 ರೂ. ಗಳಷ್ಟು ಇಳಿಕೆಯಾಗಿದೆ.  ಇಂದು ಬೆಳ್ಳಿ ದರ ಪ್ರತಿ ಕೆ.ಜಿ.ಗೆ 1,13, 000 ರೂ. ಗಳಷ್ಟಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳದಲ್ಲಿ ಇಂದು ಯಾವ ಪಾಯಿಂಟ್ ನಲ್ಲಿ ಎಸ್ಐಟಿ ಶೋಧ ನಡೆಸಲಿದೆ