Webdunia - Bharat's app for daily news and videos

Install App

Gold Price today: ಚಿನ್ನ ಖರೀದಿದಾರರಿಗೆ ಇಂದು ಸ್ವಲ್ಪ ಸಿಹಿ ಸ್ವಲ್ಪ ಕಹಿ

Krishnaveni K
ಮಂಗಳವಾರ, 13 ಮೇ 2025 (10:43 IST)
ಬೆಂಗಳೂರು: ಚಿನ್ನದ ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವುದನ್ನು ನೋಡಿ ಗ್ರಾಹಕರು ಕಂಗಾಲಾಗಿದ್ದರು. ಕಳೆದ ವಾರವಂತೂ ವಿಪರೀತ ಎನ್ನುವಷ್ಟು ಏರಿಕೆಯಾಗಿತ್ತು. ಇಂದು ಚಿನ್ನ ಖರೀದಿದಾರರಿಗೆ ಸ್ವಲ್ಪ ಸಿಹಿ ಸ್ವಲ್ಪ ಕಹಿ ಎನ್ನುವ ಪರಿಸ್ಥಿತಿ.  ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಕಳೆದ ಎರಡು ದಿನಗಳಿಂದ ಪರಿಶುದ್ಧ ಚಿನ್ನದ ಬೆಲೆ ಲಕ್ಷದ ಮೇಲೆಯೇ ಇತ್ತು. ಮೊನ್ನೆ 99.9 ಪರಿಶದ್ಧತೆಯ ಚಿನ್ನದ ಬೆಲೆ 1,00,730 ರೂ.ಗಳಷ್ಟಿತ್ತು. ಆದರೆ ಇದೀಗ ಪರಿಶುದ್ಧ ಚಿನ್ನದ ಬೆಲೆ ಭಾರೀ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ  96,050.00 ರೂ.ಗೆ ಬಂದು ನಿಂತಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 15 ರೂ. ನಷ್ಟು ಏರಿಕೆಯಾಗಿದ್ದು 8,765 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 16 ರೂ. ನಷ್ಟು ಏರಿಕೆಯಾಗಿದ್ದು 9,562 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 13 ರೂ. ನಷ್ಟು ಏರಿಕೆಯಾಗಿದ್ದು 7,172 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರವೂ ದರ ಮೊನ್ನೆಯಿಂದ ಇಳಿಕೆಯತ್ತ ಸಾಗಿತ್ತು.  ಆದರೆ ಮೊನ್ನೆ ಬೆಳ್ಳಿ ದರ ಭಾರೀ ಏರಿಕೆಯಾಗಿತ್ತು. ಇಂದು ಬೆಳ್ಳಿ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಇಂದೂ ಪ್ರತೀ ಕೆ.ಜಿ. 1000 ರೂ.ನಷ್ಟು ಇಳಿಕೆಯಾಗಿದ್ದು 97,900 ರೂ.ಗಳಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಏಕಾಏಕಿ ಉಕ್ಕಿ ಹರಿದ ಜಲಪಾತ, ಪವಾಡ ಸದೃಶ್ಯ 6 ಮಹಿಳೆಯರು ಪಾರು

ಸುರ್ಜೇವಾಲನೂ ಬರ್ತಾರೆ, ಮುಂದೆ ರಾಹುಲ್ ಗಾಂಧಿನೂ ಬರಬೇಕಾಗುತ್ತದೆ

ಪುತ್ತೂರು ಬಿಜೆಪಿ ಮುಖಂಡನ ಮಗನಿಂದ ವಂಚನೆಗೊಳಗಾದ ಯುವತಿ ಗಂಡು ಮಗುವಿಗೆ ಜನನ

ಲಿವ್‌ ಇನ್‌ ಸಂಗಾತಿಯನ್ನು ಕೊಂದು ಬಿಬಿಎಂಪಿ ಕಸದ ಲಾರಿಗೆ ಎಸೆದ ಪ್ರಿಯಕರ

94 ವರ್ಷಗಳ ಇತಿಹಾಸದಲ್ಲಿ ಜೂನ್‌ ತಿಂಗಳಲ್ಲೇ ಮೊದಲ ಭಾರೀ ಭರ್ತಿಯಾದ ಕೆಆರ್‌ಎಸ್‌, ಬಾಗಿನ ಅರ್ಪಣೆ

ಮುಂದಿನ ಸುದ್ದಿ
Show comments