Select Your Language

Notifications

webdunia
webdunia
webdunia
webdunia

Gold Price today: ಇಳಿಕೆಯಾದರೂ ಲಕ್ಷದ ಗಡಿಯಲ್ಲೇ ಇದೆ ಚಿನ್ನದ ದರ

Gold Price

Krishnaveni K

ಬೆಂಗಳೂರು , ಶುಕ್ರವಾರ, 9 ಮೇ 2025 (10:21 IST)
ಬೆಂಗಳೂರು: ಲಕ್ಷದ ಗಡಿ ದಾಟಿದ್ದ ಪರಿಶುದ್ಧ ಚಿನ್ನದ ಬೆಲೆ ಇಂದು ಮತ್ತಷ್ಟು ಏರಿಕೆಯಾಗಿ ಗ್ರಾಹಕರಿಗೆ ಶಾಕ್ ನೀಡುವಂತಿದೆ. ಇಂದು ಪರಿಶುದ್ಧ ಚಿನ್ನದ ದರ ಕೊಂಚ ಇಳಿಕೆಯಾದರೂ ಈಗಲೂ ಲಕ್ಷದಲ್ಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಕಳೆದ ಎರಡು ದಿನಗಳಿಂದ ಪರಿಶುದ್ಧ ಚಿನ್ನದ ಬೆಲೆ ಲಕ್ಷದ ಮೇಲೆಯೇ ಇದೆ. ನಿನ್ನೆ 99.9 ಪರಿಶದ್ಧತೆಯ ಚಿನ್ನದ ಬೆಲೆ 1,00,730 ರೂ.ಗಳಷ್ಟಿತ್ತು. ಇಂದು ಇದು ಕೊಂಚ ಇಳಿಕೆಯಾಗಿದ್ದರೂ ಗ್ರಾಹಕರು ನೆಮ್ಮದಿಪಡುವಷ್ಟು ಇಲ್ಲ. ಇಂದು ಚಿನ್ನದ ದರ  1,00,210.00 ರೂ.ಗೆ ಬಂದು ನಿಂತಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 115 ರೂ. ಇಳಿಕೆಯಾಗಿದ್ದು 9,015 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 125 ರೂ. ಇಳಿಕೆಯಾಗಿದ್ದು 9,835 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 94 ರೂ. ಇಳಿಕೆಯಾಗಿದ್ದು 7,376 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರವೂ ದರ ಮೊನ್ನೆಯಿಂದ ಇಳಿಕೆಯತ್ತ ಸಾಗಿತ್ತು.  ಆದರೆ ನಿನ್ನೆ ಬೆಳ್ಳಿ ದರ ಭಾರೀ ಏರಿಕೆಯಾಗಿತ್ತು. ಇಂದು ಬೆಳ್ಳಿ ದರ ಯಥಾಸ್ಥಿತಿಯಲ್ಲಿದೆ. ಇಂದೂ ಪ್ರತೀ ಕೆ.ಜಿ. ಬೆಳ್ಳಿ ಬೆಲೆ 1,11,000 ರೂ.ಗಳಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

India attacks Pakistan: ಪಾಕಿಸ್ತಾನಕ್ಕೆ ಭಾರತ ಎಷ್ಟು ಹೊಡೆತ ನೀಡಿದೆ ಕೆಲವೇ ಕ್ಷಣಗಳಲ್ಲಿ ಸಿಗಲಿದೆ ಅಪ್ ಡೇಟ್