ಬೆಂಗಳೂರು: ಲಕ್ಷದ ಗಡಿ ದಾಟಿದ್ದ ಪರಿಶುದ್ಧ ಚಿನ್ನದ ಬೆಲೆ ಇಂದು ಮತ್ತಷ್ಟು ಏರಿಕೆಯಾಗಿ ಗ್ರಾಹಕರಿಗೆ ಶಾಕ್ ನೀಡುವಂತಿತ್ತು. ಆದರೆ ಇದೀಗ ಪರಿಶುದ್ಧ ಚಿನ್ನದ ದರ ಲಕ್ಷದ ಗಡಿಯೊಳಗೇ ಬಂದಿದೆ. ಇತರೆ ವರ್ಗದ ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಕಳೆದ ಎರಡು ದಿನಗಳಿಂದ ಪರಿಶುದ್ಧ ಚಿನ್ನದ ಬೆಲೆ ಲಕ್ಷದ ಮೇಲೆಯೇ ಇತ್ತು. ಮೊನ್ನೆ 99.9 ಪರಿಶದ್ಧತೆಯ ಚಿನ್ನದ ಬೆಲೆ 1,00,730 ರೂ.ಗಳಷ್ಟಿತ್ತು. ಇಂದು ಇದು ಕೊಂಚ ಇಳಿಕೆಯಾಗಿದ್ದರೂ ಗ್ರಾಹಕರು ನೆಮ್ಮದಿಪಡುವಷ್ಟು ಇಲ್ಲ. ಇಂದು ಚಿನ್ನದ ದರ ಇಂದು 99,800.00 ರೂ.ಗೆ ಬಂದು ನಿಂತಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 165 ರೂ. ನಷ್ಟು ಇಳಿಕೆಯಾಗಿದ್ದು 8,880 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 180 ರೂ. ನಷ್ಟು ಇಳಿಕೆಯಾಗಿದ್ದ 9,668 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 135 ರೂ. ನಷ್ಟು ಇಳಿಕೆಯಾಗಿದ್ದು 7,266 ರೂ. ರಷ್ಟಾಗಿದೆ.
ಬೆಳ್ಳಿ ದರ
ಬೆಳ್ಳಿ ದರವೂ ದರ ಮೊನ್ನೆಯಿಂದ ಇಳಿಕೆಯತ್ತ ಸಾಗಿತ್ತು. ಆದರೆ ಮೊನ್ನೆ ಬೆಳ್ಳಿ ದರ ಭಾರೀ ಏರಿಕೆಯಾಗಿತ್ತು. ನಿನ್ನೆ ಬೆಳ್ಳಿ ದರ ಯಥಾಸ್ಥಿತಿಯಲ್ಲಿದೆ. ಇಂದೂ ಪ್ರತೀ ಕೆ.ಜಿ. 2000 ರೂ.ನಷ್ಟು ಇಳಿಕೆಯಾಗಿದ್ದು 1,09,000 ರೂ.ಗಳಾಗಿದೆ.