ನವದೆಹಲಿ: 2024 ಕ್ಕೆ ಗುಡ್ ಬೈ ಹೇಳುವ ಸಮಯ ಬಂದಿದ್ದು, ಈಗ ಹೊಸ ವರ್ಷದ ಬಗ್ಗೆ ಜನ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಮುಂದಿನ ವರ್ಷ ಷೇರು ಮಾರ್ಕೆಟ್ ಯಾವ ರೀತಿ ಲಾಭದಾಯಕವಾಗಿರಲಿದೆ ಎಂಬ ಬಗ್ಗೆ ಇಲ್ಲಿದೆ ವಿಶ್ಲೇಷಣೆ.
ಎಷ್ಟೋ ಮಂದಿ ತಮ್ಮ ಹಣವನ್ನು ಷೇರು ಮಾರ್ಕೆಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವರು ಇದನ್ನೇ ಉದ್ಯಮವನ್ನಾಗಿಸಿಕೊಂಡಿದ್ದಾರೆ. 2025 ನೇ ಸಾಲಿನಲ್ಲಿ ಷೇರು ಮಾರ್ಕೆಟ್ ನಂಬಿಕೊಂಡವರಿಗೆ ಸದ್ಯದ ಮಟ್ಟಿಗೆ ಹೇಳುವುದಾದರೆ ಕೊಂಚ ನಿರಾಶೆಎ ಕಾದಿದೆ ಎಂದೇ ಹೇಳಬಹುದು.
ಹೊಸ ವರ್ಷದಲ್ಲಿ ಆರ್ ಬಿಐ ಜಿಡಿಪಿಯಲ್ಲಿ 6.4% ಅಭಿವೃದ್ಧಿ ನಿರೀಕ್ಷಿಸುತ್ತಿದೆ. ಇದಕ್ಕೆ ಮೊದಲು 6.6% ಬೆಳವಣಿಗೆ ನಿರೀಕ್ಷಿಸಲಾಗಿತ್ತು. ಆದರೆ 2024 ರ ಕೊನೆಯ ಅವಧಿಯಲ್ಲಿ ಕೊಂಚ ಇಳಿಕೆಯಾಗಿರುವುದೇ ಈ ಬೆಳವಣಿಗೆಗೆ ಕಾರಣವಾಗಿದೆ. ಹಣದುಬ್ಬರ ಹೆಚ್ಚಳವಾದಂತೆ ಬಳಕೆದಾರರ ಸಂಖ್ಯೆ ಕಡಿಮೆಯಾಗಬಹುದು. ಇದರಿಂದಾಗಿ ಷೇರು ಮಾರುಕಟ್ಟೆಯ ಮೇಲೂ ಪರಿಣಾಮ ಕಂಡುಬರಬಹುದು ಎಂದು ನಿರೀಕ್ಷಿಸಲಾಗಿದೆ.
ತಜ್ಞರ ಪ್ರಕಾರ 2025 ರಲ್ಲಿ ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಸವಾಲುಗಳು ಎದುರಾಗಬಹುದು. ವರ್ಷಾಂತ್ಯದಲ್ಲೂ ನಿಫ್ಟಿ ಸೆನ್ಸೆಕ್ಸ್ ಡಲ್ ಆಗಿದ್ದು 2025 ರ ಆರಂಭದಲ್ಲೂ ಇದು ಮುಂದುವರಿಯುವ ಸಾಧ್ಯತೆಯಿದೆ.
ಆದರೆ ಅಮೆರಿಕಾದಲ್ಲಿ ಟ್ರಂಪ್ ಆಡಳಿತ ಆರಂಭವಾಗಲಿದ್ದು ಕೆಲವೊಂದು ವಿದೇಶೀ ಉತ್ಪನ್ನಗಳ ಷೇರು ಮೌಲ್ಯ ಹೆಚ್ಚಳವಾಗಬಹುದು. ಈ ವರ್ಷ ಯಾವುದೇ ರಾಷ್ಟ್ರಗಳ ನಡುವೆ ಯುದ್ಧಗಳಾದರೂ ಮತ್ತೆ ಷೇರು ಮಾರುಕಟ್ಟೆಗೆ ಹೊಡೆತ ಬೀಳಬಹುದು. ವರ್ಷದ ಮಧ್ಯಾವಧಿ ಬಳಿಕ ಚೇತರಿಕೆ ಕಂಡುಬರುವ ಸಾಧ್ಯತೆಯಿದೆ. ಸದ್ಯಕ್ಕೆ ಉತ್ತಮ ಮಳೆ, ಬೆಳೆ ಜೊತೆಗೆ ಸ್ಥಿರ ಆಡಳಿತದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.