Select Your Language

Notifications

webdunia
webdunia
webdunia
webdunia

ರಿಲಯನ್ಸ್ ಜಿಯೊ ಬಗ್ಗೆ ಇಂತಹದ್ದೊಂದು ಸುದ್ದಿ ಬಂದರೆ ನಂಬಬೇಡಿ!

ರಿಲಯನ್ಸ್ ಜಿಯೊ ಬಗ್ಗೆ ಇಂತಹದ್ದೊಂದು ಸುದ್ದಿ ಬಂದರೆ ನಂಬಬೇಡಿ!
ನವದೆಹಲಿ , ಶನಿವಾರ, 1 ಸೆಪ್ಟಂಬರ್ 2018 (08:52 IST)
ನವದೆಹಲಿ: ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಅಗ್ಗದ ದರಕ್ಕೆ ಇಂಟರ್ನೆಟ್ ಸೇವೆ ಒದಗಿಸಿ ಹೊಸ ಕ್ರಾಂತಿ ಹುಟ್ಟುಹಾಕಿದ ರಿಲಯನ್ಸ್ ಜಿಯೋ ಬಗ್ಗೆ ಇದೀಗ ವ್ಯಾಟ್ಸಪ್ ಗಳಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ.

ಜಿಯೋ ಹೆಸರು ಹೇಳಿಕೊಂಡು ನಕಲಿ ಉದ್ಯೋಗದ ಬಗ್ಗೆ ಸಂದೇಶ ಹರಿದಾಡುತ್ತಿದೆ. ಇದನ್ನು ನಂಬದಂತೆ ಸ್ವತಃ ರಿಲಯನ್ಸ್ ಸಂಸ್ಥೆ ಸ್ಪಷ್ಟನೆ ನೀಡಿದೆ.

ರಿಲಯನ್ಸ್ ನಲ್ಲಿ ಮನೆಯಲ್ಲೇ ಕುಳಿತು ಎಸ್ಎಂಎಸ್ ಕಳುಹಿಸುವ ಕೆಲಸ ಖಾಲಿಯಿದೆ. ಇದಕ್ಕೆ ಅನುಭವವೂ ಬೇಕಾಗಿಲ್ಲ. ತಿಂಗಳಿಗೆ 60000 ರೂ.ವರೆಗೆ ಸಂಪಾದಿಸಬಹುದು ಎಂಬ ಸುಳ್ಳು ಸಂದೇಶ ಬರುತ್ತಿದೆ. ಆದರೆ ಇದು ನಕಲಿ ಆಗಿದ್ದು, ಯಾರೂ ನಂಬಬಾರದು. ಸಂಸ್ಥೆ ವತಿಯಿಂದ ಇಂತಹ ಯಾವುದೇ ಆಫರ್ ನೀಡಲಾಗಿಲ್ಲ ಎಂದು ರಿಲಯನ್ಸ್ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಮದುವೆ ಸುದ್ದಿ ಜೋರು! ಹುಡುಗಿ ಯಾರು ಗೊತ್ತಾ?!