Publish Date: Wed, 29 May 2019 (11:59 IST)
Updated Date: Wed, 29 May 2019 (12:00 IST)
ಬೆಂಗಳೂರು : ಆನ್ ಲೈನ್ ನಲ್ಲಿ ವಸ್ತುಗಳನ್ನು ಆರ್ಡರ್ ಮಾಡಿದ್ದಾಗ ಹೆಚ್ಚಾಗಿ ಕಂಪೆನಿಯೇ ಗ್ರಾಹಕರಿಗೆ ವಂಚಿಸುವ ಘಟನೆಗಳನ್ನು ನಾವು ಹಲವು ಬಾರಿ ಕೇಳಿದ್ದೇವೆ, ಆದರೆ ಇದೀಗ ಫ್ಲಿಪ್ ಕಾರ್ಟ್ ಡೆಲಿವರಿ ಬಾಯ್ ಗೆ ಗ್ರಾಹಕನೇ ಮೋಸ ಮಾಡಿದ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಹುಲ್ ಮೋಸ ಮಾಡಿದ ಗ್ರಾಹಕ. ಈತ ಫ್ಲಿಪ್ ಕಾರ್ಟ್ ನಲ್ಲಿ 50,000 ರೂ. ಬೆಲೆಯ ಫೋನ್ ಬುಕ್ ಮಾಡಿದ್ದು, ಅದನ್ನು ಪಡೆಯಲು ತನ್ನ ಸ್ನೇಹಿತರ ಜೊತೆ ಆರ್.ಆರ್. ನಗರದ ಬಳಿ ಬಂದಿದ್ದಾಗ ಹಣ ಕಡಿಮೆ ಇದೆ ಆಮೇಲೆ ಪಡೆಯವುದಾಗಿ ಹೇಳಿ ಮೊಬೈಲ್ ಪರಿಶೀಲಿಸುವ ನೆಪದಲ್ಲಿ ಬಾಕ್ಸ್ ನಲ್ಲಿದ್ದ ಮೊಬೈಲ್ ತೆಗೆದುಕೊಂಡು ಕಲ್ಲು ಇಟ್ಟಿದ್ದಾರೆ.
ಫ್ಲಿಪ್ ಕಾರ್ಟ್ ಕಚೇರಿಗೆ ವಾಪಸ್ ಬಂದ ಡೆಲಿವರಿ ಬಾಯ್ ಪರಿಶೀಲಿಸಿದಾಗ ರಾಹುಲ್ ವಂಚಿಸಿರುವುದು ಗೊತ್ತಾಗಿದೆ. ಅವರು ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.