Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾದಲ್ಲಿ ವಿಚಿತ್ರವಾದ ಮೂರು ಕಣ್ಣಿನ ಹಾವು ಪತ್ತೆ

ಆಸ್ಟ್ರೇಲಿಯಾದಲ್ಲಿ ವಿಚಿತ್ರವಾದ ಮೂರು ಕಣ್ಣಿನ ಹಾವು ಪತ್ತೆ
ಆಸ್ಟ್ರೇಲಿಯಾ , ಶುಕ್ರವಾರ, 3 ಮೇ 2019 (07:01 IST)
ಆಸ್ಟ್ರೇಲಿಯಾ : ಜಗತ್ತಿನಲ್ಲಿ ಆಗಾಗ ವಿಸ್ಮಯಕಾರಿ ಘಟನೆಗಳು ನಡೆಯುತ್ತಿರುತ್ತದೆ. ಅದೇರೀತಿ ಇತ್ತೀಚೆಗೆ ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿ ಮೂರು ಕಣ್ಣಿನ ಹಾವು ಪತ್ತೆಯಾಗಿದೆ.




ಕಳೆದ ಮಾರ್ಚ್ ನಲ್ಲಿ ಆಸ್ಟ್ರೇಲಿಯಾದ ಉತ್ತರ ಪ್ರಾಂತೀಯ ಹೆದ್ದಾರಿಯಲ್ಲಿ ಫೈಥಾನ್ ಜಾತಿಗೆ ಸೇರಿದ ಈ ಹಾವು ಪತ್ತೆಯಾಗಿದ್ದು, ಅದರ ಫೋಟೋಗಳನ್ನು ನಾರ್ಥನ್ ಟೆರಿಟರಿ ಪಾರ್ಕ್ಸ್ ಮತ್ತು ವೈಲ್ಡ್ ಲೈಫ್ ತನ್ನ ಫೇಸ್ ಬುಕ್ ನಲ್ಲಿ ಬುಧವಾರ ಹಂಚಿಕೊಂಡಿದ್ದು, ಇದೀಗ ಅದು ಆನ್ ಲೈನ್ ನಲ್ಲಿ ವೈರಲ್ ಆಗಿದೆ. ಈ ಫೇಸ್ ಬುಕ್ ಪೋಸ್ಟ್ ಗೆ ಎಂಟು ಸಾವಿರಕ್ಕೂ ಹೆಚ್ಚು ಕಾಮೆಂಟ್ಸ್ ಬಂದಿದ್ದು, ಹದಿಮೂರು ಸಾವಿರಕ್ಕೂ ಹೆಚ್ಚು ಶೇರ್ ಆಗಿದೆ.


ಆದರೆ ಈ ಹಾವು  ಕಂಡುಹಿಡಿದ ಒಂದೇ ವಾರಕ್ಕೆ ಆಹಾರ ಸೇವಿಸಲು ಅದು ವಿಫಲವಾದ ಹಿನ್ನೆಲೆಯಲ್ಲಿ ದುರದೃಷ್ಟವಶಾತ್ ಅದು ಮೃತಪಟ್ಟಿದೆ. ವರದಿಗಳ ಪ್ರಕಾರ, ಮೂರನೇ ಕಣ್ಣು ಕೂಡ ಕೆಲಸ ನಿರ್ವಹಿಸುತ್ತಿದ್ದು, ಅದು ಸಹಜವಾಗಿಯೇ ರೂಪುಗೊಂಡಂತೆ ಇತ್ತು ಅಲ್ಲದೇ ಇದಕ್ಕೆ ಪ್ರತ್ಯೇಕವಾದ ಎರಡು ತಲೆ ಇರಲಿಲ್ಲ. ಅದರ ಬದಲಿಗೆ ಒಂದೇ ತಲೆಯಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಹೂರ್ತ ಫಿಕ್ಸ್