Publish Date: Wed, 11 Sep 2019 (07:20 IST)
Updated Date: Wed, 11 Sep 2019 (07:23 IST)
ನವದೆಹಲಿ : ಓಣಂ ಹಬ್ಬದ ಪ್ರಯುಕ್ತ ಸರ್ಕಾರಿ ಸ್ವಾಮ್ಯದ ಬಿಎಸ್.ಎನ್.ಎಲ್. 'ಓಣಂ ಸ್ಮಾರ್ಟ್ ಪ್ಲಾನ್' ಎಂದು ಹೆಸರಿನ ಹೊಸ ಪ್ರಿಪೇಯ್ಡ್ ಪ್ಲಾನ್ ನ್ನು ಪರಿಚಯಿಸಿದೆ.
ಬಿಎಸ್.ಎನ್.ಎಲ್. ನ ಈ 'ಓಣಂ ಸ್ಮಾರ್ಟ್ ಪ್ಲಾನ್' ನಲ್ಲಿ ಗ್ರಾಹಕರು 234 ರೂಪಾಯಿ ರಿಚಾರ್ಜ್ ಮಾಡಿದರೆ 90GB ಡೇಟಾ ಉಚಿತವಾಗಿ ದೊರೆಯಲಿದೆ. ಜೊತೆಗೆ ಗ್ರಾಹಕರಿಗೆ ದಿನಕ್ಕೆ 250 ನಿಮಿಷಗಳ ಉಚಿತ ಕರೆಯನ್ನು ನೀಡುತ್ತಿದೆ. ಅಲ್ಲದೇ ಪ್ರತಿ ದಿನ 100SMSಗಳನ್ನು ಉಚಿತವಾಗಿ ಸಿಗಲಿದ್ದು, ಇದು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಆದರೆ ಈ 'ಓಣಂ ಸ್ಮಾರ್ಟ್ ಪ್ಲಾನ್' ಕೇರಳಿಗರಿಗೆ ಮಾತ್ರ ಲಭ್ಯವಿದ್ದು, ಕೇರಳಿಗರು *444*234# ಕರೆ ಮಾಡುವ ಮೂಲಕ ಈ ಪ್ಲಾನ್ ಅನ್ನು ಅಳವಡಿಸಬಹುದಾಗಿದೆ. ಅಲ್ಲದೆ, PLAN<space>SMART ಸಂದೇಶ ಕಳುಹಿಸುವ ಮೂಲಕ ಪ್ಲಾನ್ ಅನ್ನು ರಿಚಾರ್ಜ್ ಮಾಡಬಹುದಾಗಿದೆ.