ಬಿ.ಎಸ್.ಎನ್.ಎಲ್ ತನ್ನ ಲ್ಯಾಂಡ್ ಲೈನ್ ಗ್ರಾಹಕರಿಗೆ ನೀಡುತ್ತಿದೆ 5GB ಇಂಟರ್ ನೆಟ್ ಆಫರ್

ಬುಧವಾರ, 17 ಜುಲೈ 2019 (06:05 IST)
ನವದೆಹಲಿ : ಸರಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್ ತನ್ನ ಲ್ಯಾಂಡ್ ಲೈನ್ ಗ್ರಾಹಕರಿಗಾಗಿ 5GB ಇಂಟರ್ ನೆಟ್ ಆಫರ್ ನ್ನು ಪರಿಚಯಿಸಿದೆ.
ಈ 5GB ಉಚಿತ ಡೇಟಾದೊಂದಿಗೆ ಕಂಪನಿಯು 10Mbps ವರೆಗೆ ಇಂಟರ್ನೆಟ್ ವೇಗವನ್ನು ಒದಗಿಸುತ್ತಿದೆ. ಅದೇ ಸಮಯದಲ್ಲಿ ಈ ಡೇಟಾ ಮುಗಿದ ನಂತರ ಸ್ಪೀಡ್ 1Mbps ಪಡೆಯುತ್ತಾರೆ. ಈ ಕೊಡುಗೆಯಡಿಯಲ್ಲಿ ಬಳಕೆದಾರರು 1GB ಸ್ಟೊರೇಜ್ ಸಹಿತ ಬಿ.ಎಸ್‌.ಎನ್‌.ಎಲ್ ಇ ಮೇಲ್ ಐಡಿಯೂ ದೊರೆಯಲಿದೆ.


ಬಿ.ಎಸ್‌.ಎನ್‌.ಎಲ್ ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೊರಡಿಸಲಾದ ಸುತ್ತೋಲೆಯ ಪ್ರಕಾರ ಈ ಆಫರ್ ಅಸ್ತಿತ್ವದಲ್ಲಿರುವ ಎಲ್ಲಾ ಲ್ಯಾಂಡ್‌ಲೈನ್ ಬಳಕೆದಾರರಿಗೆ ಲಭ್ಯವಿದೆ. ಆದರೆ ಅಂಡಮಾನ್ ಮತ್ತು ನಿಕೋಬಾರ್‌ ನಲ್ಲಿ ಈ ಕೊಡುಗೆ ಲಭ್ಯವಿಲ್ಲ.


ಬಳಕೆದಾರರು ಪ್ಲ್ಯಾನ್ ಆಕ್ಟಿವೇಟ್ ಆದ ಬಳಿಕ 30 ದಿನದವರೆಗೆ ಬಳಸಬಹುದು. ಆದರೆ ಟ್ರಯಲ್ ಆಫರ್ ಬಳಸಲು ಮೋಡೆಮ್ ಅನ್ನು ಗ್ರಾಹಕರೇ ಹೊಂದಿರಬೇಕು. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಬೇಕಿಲ್ಲ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ‘ಬಿಜೆಪಿ ಮುಖಂಡರ ದೊಡ್ಡ ಡ್ರಾಮಾ ಏನು?'