‘ಬಿಜೆಪಿ ಮುಖಂಡರ ದೊಡ್ಡ ಡ್ರಾಮಾ ಏನು?'

ಮಂಗಳವಾರ, 16 ಜುಲೈ 2019 (17:11 IST)
ದೋಸ್ತಿ ಸರಕಾರದ ಶಾಸಕರು ರಾಜೀನಾಮೆ ನೀಡಿರೋ ಹಿಂದೆ ಬಿಜೆಪಿ ಕೈವಾಡವಿಲ್ಲ ಅಂತ ಬಿಜೆಪಿ ಹೇಳಿರುವುದು ಅದು ಆ ಪಕ್ಷದ ಮುಖಂಡರ ಡ್ರಾಮಾ ನಡೆಸ್ತಿರೋದಕ್ಕೆ ಸಾಕ್ಷಿ ಅಂತ ಟೀಕೆ ಕೇಳಿಬಂದಿದೆ.

ಸಚಿವ ಎಂಟಿಬಿ ನಾಗರಾಜ್ ಅವರನ್ನು ಬಿಜೆಪಿ ಮುಖಂಡರೇ ಕರೆದುಕೊಂಡು ಹೋಗಿದ್ದಾರೆ. ಶಾಸಕ ರೋಷನ್ ಬೇಗ್ ಅವರನ್ನು ಕರೆದುಕೊಂಡು ಹೋಗಲು ಬಂದವರು ಯಾರು ಅಂತ ಮಾಜಿ ಸಚಿವ ತನ್ವೀರ್ ಸೇಠ್ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ನಾಯಕರ ನಾಟಕ ಎಲ್ಲಾ ಜನರಿಗೂ ಗೊತ್ತಾಗಿದೆ. ಬೆಕ್ಕು ಕಣ್ಣು ಮುಚ್ಚಿಹಾಲು ಕುಡಿದರೆ ಗೊತ್ತಾಗೋಲ್ಲವೇ ಅಂತಂದ ಅವರು, ಮೈತ್ರಿ ಸರಕಾರಕ್ಕೆ ಯಾವುದೇ ತೊಂದರೆ ಆಗೋದಿಲ್ಲ ಎಂದ್ರು.

ವಿಶ್ವಾಸ ಮತವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಾಬೀತುಪಡಿಸಲಿದ್ದಾರೆ ಅಂತ ತನ್ವೀರ್ ಸೇಠ್ ಹೇಳಿದ್ರು.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಬ್ಲಿಕ್ ನಲ್ಲಿ ಆ ಕೆಲಸ ಮಾಡಿದ್ದಕ್ಕೆ ಕೊಂದೇ ಬಿಡೋದಾ?