Select Your Language

Notifications

webdunia
webdunia
webdunia
webdunia

ಯುಪಿಐ ಪಾವತಿದಾರರಿಗೆ ಬಿಗ್ ಶಾಕ್: ಇನ್ಮುಂದೆ ಪಿನ್ ಆಟ ನಡೆಯಲ್ಲ

UPI lite

Krishnaveni K

ನವದೆಹಲಿ , ಬುಧವಾರ, 8 ಅಕ್ಟೋಬರ್ 2025 (11:16 IST)
ನವದೆಹಲಿ: ಯುಪಿಐ ಪಾವತಿ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರಲು ರಾಷ್ಟ್ರೀಯ ಪಾವತಿ ನಿಗಮ ಮಹತ್ವದ ಹೆಜ್ಜೆಯಿಟ್ಟಿದೆ. ಯುಪಿಐ ಪಾವತಿಗೆ ಇನ್ಮುಂದೆ ಪಿನ್ ಬದಲು ಮುಖ, ಬೆರಳಚ್ಚು ದೃಢೀಕರಣ ನೀಡುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಈ ಹೊಸ ವ್ಯವಸ್ಥೆ ಇಂದಿನಿಂದಲೇ ಜಾರಿಗೆ ಬರಲಿದೆ.  ಪಿನ್ ಸಂಖ್ಯೆ ನಮೂದಿಸುವುದರಿಂದ ಹಲವು ಬಾರಿ ದುರ್ಬಳಕೆಯಾದ ಘಟನೆಗಳು ವರದಿಯಾಗಿತ್ತು. ಇದನ್ನು ತಪ್ಪಿಸುವ ಸಲುವಾಗಿ ಫೇಸ್ ಡಿಟೆಕ್ಷನ್ ಅಥವಾ ಬೆರಳಚ್ಚು ದೃಢೀಕರಣದ ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ.

ಬೆರಳಚ್ಚು ಅಥವಾ ಮುಖ ದೃಢೀಕರಣ ವ್ಯವಸ್ಥೆ ಜಾರಿಗೆ ತಂದರೆ ನಕಲು ಮಾಡಲು ಸಾಧ್ಯವಿಲ್ಲ. ಇದರಿಂದ ಯುಪಿಐ ಪಾವತಿ ವಂಚನೆಗಳನ್ನು ತಡೆಯಬಹುದು. ಅನಧಿಕೃತ ಹಣದ ಪಾವತಿ ನಿಯಂತ್ರಿಸಬಹುದು ಮತ್ತು ಪಿನ್ ಕದಿಯುವುದರಿಂದ ಉಂಟಾಗುವ ಅಪಾಯಗಳನ್ನು ತಡೆಯಬಹುದು ಎಂಬ ನಿಟ್ಟಿನಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಯುಪಿಐ ವಹಿವಾಟಿನಲ್ಲಿ ಪಿನ್ ಬದಲಿಗೆ ಪರ್ಯಾಯ ದೃಢೀಕರಣ ವಿಧಾನವನ್ನು ಬಳಸಲು ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಪಾವತಿ ನಿಗಮ ಈ ನಿರ್ಧಾರ ಪ್ರಕಟಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಾತಿಗಣತಿಗಾಗಿ ಶಾಲೆಗೆ ರಜೆಯೋ ರಜೆ: ಮಕ್ಕಳ ಪಾಠ ಮುಗಿಯೋದು ಹೇಗೆ