Publish Date: Sat, 04 Oct 2025 (13:27 IST)
Updated Date: Sat, 04 Oct 2025 (13:31 IST)
ಬೆಂಗಳೂರು: ದಸರಾ ಹಬ್ಬ ಮುಗಿದರೂ ಚಿನ್ನದ ಬೆಲೆ ದುಬಾರಿಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ದಾಖಲೆಯ ಮೊತ್ತಕ್ಕೆ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಿದ್ದು ದಾಖಲೆಯ ಮಟ್ಟಕ್ಕೆ ತಲುಪಿದೆ. ಈಗಂತೂ ಮಧ್ಯಮ ವರ್ಗದವರಿಗೆ ಚಿನ್ನ ಕೊಳ್ಳುವುದು ಕನಸೇ ಎಂಬಂತಾಗಿದೆ. ಅದರಲ್ಲೂ ಈಗ ಹಬ್ಬದ ಸೀಸನ್ ಆಗಿರುವುದರಿಂದ ಚಿನ್ನ ಕೊಳ್ಳುವವರ ಸಂಖ್ಯೆಯೂ ಹೆಚ್ಚು. ಇಂತಹ ಸಂದರ್ಭದಲ್ಲೇ ಚಿನ್ನದ ಬೆಲೆಯೂ ಗಗನಕ್ಕೇರಿದೆ. ಪರಿಶುದ್ಧ ಚಿನ್ನದ ಬೆಲೆ ಮಾತ್ರ ಇಂದು ಬಲು ದುಬಾರಿಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ1,20.840.00 ರೂ.ಗಳಷ್ಟಿತ್ತು. ಆದರೆ ಇಂದು ಭಾರೀ ಏರಿಕೆ ಕಂಡಿದ್ದು, 1,21.370.00 ರೂ.ಗಳಾಗಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 87 ರೂ.ಗಳಷ್ಟು ಏರಿಕೆಯಾಗಿದ್ದು 11,940 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 80 ರೂ.ಗಳಷ್ಟು ಏರಿಕೆಯಾಗಿದ್ದು 10,945 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು 65 ರೂ.ಗಳಷ್ಟು ಏರಿಕೆಯಾಗಿದ್ದು 8,955 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರವೂ ಈಗ ದಾಖಲೆಯ ಮಟ್ಟದಲ್ಲೇ ಇದೆ. ಇಂದು ಬರೋಬ್ಬರಿ 4,000 ರೂ. ಏರಿಕೆ ಕಂಡಿದೆ. ಇಂದು ಪ್ರತೀ ಕೆ.ಜಿಗೆ ಬೆಳ್ಳಿ ದರ 1,55,000 ರೂ. ಗಳಷ್ಟಿದೆ.