Publish Date: Thu, 15 May 2025 (10:35 IST)
Updated Date: Thu, 15 May 2025 (10:37 IST)
ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ಅಡಿಕೆ ಬೆಲೆ ಇಳಿಕೆಯಾಗಿ ಗ್ರಾಹಕರಿಗೆ ನಿರಾಸೆಯಾಗಿತ್ತು. ಇಂದು ಕೆಲವು ವರ್ಗದ ಅಡಿಕೆ ಬೆಲೆ ಮಾತ್ರ ಏರಿಕೆಯಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಹೇಗಿದೆ ಇಲ್ಲಿದೆ ವಿವರ.
ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಆದರೆ ಎರಡು ದಿನಗಳ ಹಿಂದೆ ಅಡಿಕೆ ಬೆಲೆ ಕೊಂಚವೇ ಇಳಿಕೆಯಾಗಿ ಗ್ರಾಹಕರಿಗೆ ನಿರಾಸೆಯಾಗಿತ್ತು. ಆದರೆ ಇಂದು ಹೊಸಅ ಅಡಿಕೆ ಮತ್ತು ಹಳೆ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದೆ. ಹೊಸ ಅಡಿಕೆ ಬೆಲೆ 460 ರೂ.ಗಳಷ್ಟೇ ಇದ್ದರೆ ಹಳೆ ಅಡಿಕೆ ಬೆಲೆ ಗರಿಷ್ಠ 490 ರೂ.ಗಳಷ್ಟಿದೆ. ಇಂದು ಡಬಲ್ ಚೋಲ್ ಬೆಲೆಯಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಇಂದೂ 490 ರೂ.ಗಳಷ್ಟೇ ಇದೆ.
ಉಳಿದಂತೆ ಪಟೋರ ಮತ್ತು ಇತರೆ ಅಡಿಕೆ ಬೆಲೆಯಲ್ಲಿ ಏರಿಕೆಯಾಗಿದೆ. ಹೊಸ ಫಟೋರ ದರ 360 ರೂ.ಗಳಷ್ಟಿತ್ತು. ಇಂದು 370 ರೂ.ಗಳಷ್ಟಾಗಿದೆ. ಹಳೆ ಫಟೋರ ದರ 370 ರೂ. ಗಳಷ್ಟಾಗಿತ್ತು. ಇಂದು 375 ರೂ.ಗಳಷ್ಟಾಗಿದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು. ಇಂದೂ ಅದೇ ರೀತಿ ಮುಂದುವರಿದಿದೆ. ಹೊಸ ಉಳ್ಳಿಗೆ ಗರಿಷ್ಠ 250 ರೂ., ಹಳೆ ಉಳ್ಳಿ ದರವೂ 250 ರೂ.ಗೆ ಗಳಷ್ಟಿದೆ. ಹೊಸ ಕೋಕ ದರವೂ 5 ರೂ. ಏರಿಕೆಯಾಗಿದ್ದ 305 ರೂ.ಆಗಿದೆ. ಹಳೇ ಕೋಕ 5 ರೂ. ಏರಿಕೆಯಾಗಿ 305 ರೂ. ಗಳಷ್ಟೇ ಇದೆ.
ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಕಳೆದ ವಾರ ಸತತವಾಗಿ ಬೆಲೆ ಇಳಿಕೆಯಾಗಿ ನಿರಾಸೆಯಾಗಿತ್ತು. ಇಂದು ಕಾಳುಮೆಣಸು ದರ ಯಥಾಸ್ಥಿತಿಯಲ್ಲಿದ್ದು 650 ರೂ.ಗಳಷ್ಟೇ ಇದೆ. ಇನ್ನು ಒಣಕೊಬ್ಬರಿ 2 ರೂ. ನಷ್ಟು ಏರಿಕೆಯಾಗಿದ್ದು ಗರಿಷ್ಠ 182 ರೂ.ಗಳಷ್ಟಾಗಿದೆ.