Select Your Language

Notifications

webdunia
webdunia
webdunia
webdunia

ವರದಿಯ ಪ್ರಕಾರ ಅತಿ ಹೆಚ್ಚು ವೇಗದ 4ಜಿ ಡೌನ್ಲೋಡ್ ಸ್ಪೀಡ್ ಹೊಂದಿದ ಟೆಲಿಕಾಂ ಕಂಪೆನಿ ಯಾವುದು ಗೊತ್ತಾ?

ವರದಿಯ ಪ್ರಕಾರ ಅತಿ ಹೆಚ್ಚು ವೇಗದ 4ಜಿ ಡೌನ್ಲೋಡ್ ಸ್ಪೀಡ್ ಹೊಂದಿದ ಟೆಲಿಕಾಂ ಕಂಪೆನಿ ಯಾವುದು ಗೊತ್ತಾ?
ನವದೆಹಲಿ , ಭಾನುವಾರ, 4 ನವೆಂಬರ್ 2018 (13:04 IST)
ನವದೆಹಲಿ : ಟೆಲಿಕಾಂ ಕಂಪೆನಿಗಳ ನಡುವೆ ಆಫರ್ ಗಳ ವಿಚಾರದಲ್ಲಿ ಆಗಾಗ ಪೈಪೋಟಿ ನಡೆಯುತ್ತಿದೆ. ಆದರೆ ಇದೀಗ ವೇಗದ ವಿಚಾರದಲ್ಲಿ ಯಾವ ಕಂಪೆನಿ ಮುಂದಿದೆ ಎಂಬ ವರದಿ ಹೊರಬಿದ್ದಿದೆ.


ಏರ್ಟೆಲ್ ಜೂನ್ ನಿಂದ ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ವೇಗದ 4ಜಿ ಡೌನ್ಲೋಡ್ ಸ್ಪೀಡ್ ಹೊಂದಿದ ಕಂಪೆನಿಯಾಗಿದೆ. ಡೌನ್ಲೋಡ್ ವಿಚಾರದಲ್ಲಿ ಬೇರೆ ಕಂಪನಿಗಳಿಗಿಂತ ಏರ್ಟೆಲ್ ಶೇಕಡಾ 30ರಷ್ಟು ಮುಂದಿದೆ. ಜೂನ್ ನಿಂದ ಆಗಸ್ಟ್ 29ರ ಅವಧಿಯಲ್ಲಿ ಏರ್ಟೆಲ್ ಡೌನ್ಲೋಡ್ ವೇಗ 7.73 Mbps ಇದ್ದರೆ, ಜಿಯೋ ವೇಗ 5.47 Mbps, 5.2 Mbps ವೇಗದಲ್ಲಿ ವೋಡಾಫೋನ್, 4.92 Mbps ವೇಗದಲ್ಲಿ ಐಡಿಯಾ ಇದೆ.


ನೆಟ್ವರ್ಕ್ ಕವರೇಜ್ ಹಾಗೂ ಮೊಬೈಲ್ ನಲ್ಲಿ ಮಾತನಾಡುವ ವೇಳೆ ಶಬ್ಧದ ವೇಗದಲ್ಲಿ ರಿಲಯನ್ಸ್ ಜಿಯೋ ಮುಂದಿದೆ. ಅಪ್ಲೋಡ್ ವಿಚಾರದಲ್ಲಿ ಐಡಿಯಾ, 3.97 Mbps ವೇಗದಲ್ಲಿ ಮೊದಲ ಸ್ಥಾನ ಪಡೆದುಕೊಂಡರೆ, ಏರ್ಟೆಲ್ ಎರಡನೇ ಸ್ಥಾನದಲ್ಲಿದೆ. ಹಾಗೇ ವೋಡಾಫೋನ್ ಹಾಗೂ ಜಿಯೋ ಮೂರು, ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿ ನಿರಾಕರಿಸಿದ ಯುವತಿಯ ಮೇಲೆ ಸ್ನೇಹಿತರ ಜೊತೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಯುವಕ