Publish Date: Sun, 04 Nov 2018 (12:56 IST)
Updated Date: Sun, 04 Nov 2018 (12:59 IST)
ಒಡಿಶಾ : ಪ್ರೀತಿಯನ್ನು ನಿರಾಕರಿಸಿದ ಪ್ರೇಯಸಿಯ ಮೇಲೆ ಯುವಕನೊಬ್ಬ ತನ್ನ ಸ್ನೇಹಿತರ ಜೊತೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಅಂಗುಲ್ ಜಿಲ್ಲೆಯ ಪಲ್ಲಹರಾದಲ್ಲಿ ನಡೆದಿದೆ.
ಕಾಲಿಯಾ ಮಹಾಕುದ್, ಹೇಮಂತ್ ಮಹಾಕುದ್ ಮತ್ತು ದುಶಾಸನ್ ಸೀತಾರಿ ಅತ್ಯಾಚಾರ ಮಾಡಿದ ಆರೋಪಿಗಳು. ಆರೋಪಿ ಕಾಲಿಯಾ ಮರಗೆಲಸ ಮಾಡುತ್ತಿದ್ದು, ಈತ ಕಳೆದ ಎರಡು-ಮೂರು ವರ್ಷಗಳಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಆ ಹುಡುಗಿ ಈತನ ಪ್ರೇಮ ನಿವೇದನೆಯನ್ನು ನಿರಾಕರಿಸಿದಕ್ಕೆ ಕೋಪಗೊಂಡ ಆತ ತನ್ನ ಸ್ನೇಹಿತರಾದ ಹೇಮಂತ್ ಮಹಾಕುದ್ ಮತ್ತು ದುಶಾಸನ್ ಸೀತಾರಿ ಜೊತೆ ಸೇರಿ ಅಕ್ಟೋಬರ್ 30 ರಂದು ರಾತ್ರಿ 11 ಗಂಟೆ ವೇಳೆಗೆ ಬಲವಂತದಿಂದ ಹುಡುಗಿಯನ್ನು ಮನೆಯಿಂದ ಕರೆದುಕೊಂಡು ಹೋಗಿ ಸಾಮುಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.
ಈ ಘಟನೆಯ ಬಗ್ಗೆ ಯುವತಿ ತನ್ನ ಪೋಷಕರಿಗೆ ತಿಳಿಸಿದ್ದು, ಬಳಿಕ ಪೋಷಕರು ಪಲ್ಲಹರಾ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಕಾಲಿಯಾನನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ