Publish Date: Fri, 13 Apr 2018 (08:48 IST)
Updated Date: Fri, 13 Apr 2018 (18:54 IST)
ಪುಣೆ: ಕಾವೇರಿ ಗಲಾಟೆಯಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತನ್ನ ತವರಿನಲ್ಲಿ ಪಂದ್ಯವಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಚೆನ್ನೈ ತಂಡ ಆಡಲಿರುವ ತವರಿನ ಪಂದ್ಯಗಳು ಪುಣೆಗೆ ಶಿಫ್ಟ್ ಆಗಿವೆ.
ಚೆನ್ನೈ ತಂಡ ನಿಷೇಧದಲ್ಲಿದ್ದಾಗ ಧೋನಿ ಸೇರಿದಂತೆ ಹೆಚ್ಚಿನ ಸಿಎಸ್ ಕೆ ತಂಡದ ಆಟಗಾರರು ಪುಣೆ ವಾರಿಯರ್ಸ್ ಪರ ಆಡಿದ್ದರು. ಇದೀಗ ಧೋನಿ ಮತ್ತೆ ಸಿಎಸ್ ಕೆ ತಂಡದಲ್ಲಿದ್ದರೂ ಪುಣೆಯಲ್ಲೇ ತವರಿನಂತೆ ಪಂದ್ಯಗಳನ್ನು ಆಡಬೇಕಾಗಿದೆ.
ಮೊನ್ನೆ ಕೆಕೆಆರ್ ವಿರುದ್ಧ ಚೆನ್ನೈ ಮೈದಾನದಲ್ಲಿ ಪಂದ್ಯವಾಡುತ್ತಿದ್ದಾಗ ಪ್ರತಿಭಟನಾಕಾರರು ದಾಂಧಲೆ ಎಬ್ಬಿಸಿದ್ದರು. ಈ ಹಿನ್ನಲೆಯಲ್ಲಿ ಭದ್ರತಾ ಕಾರಣಗಳಿಂದ ಚೆನ್ನೈಯಿಂದ ಪಂದ್ಯಗಳನ್ನು ಪುಣೆಗೆ ಶಿಫ್ಟ್ ಮಾಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.