Webdunia - Bharat's app for daily news and videos

Install App

ವಿಶ್ವದ ಅತ್ಯುತ್ತಮ ಅಭಿಮಾನಿಗಳ ಸಂಭ್ರಮಿಸಿದ ಆರ್‌ಸಿಬಿ ಫ್ರಾಂಚೈಸಿ

Sampriya
ಭಾನುವಾರ, 19 ಮೇ 2024 (14:47 IST)
Photo Courtesy X
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇರಿದ್ದ ಅಪಾರ ಅಭಿಮಾನಿಗಳ ಹರ್ಷೋದ್ಘಾರದ‌ ಮುಂದೆ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಗೆದ್ದು ಬೀಗಿದೆ. ಈ ಮಧ್ಯೆ ಮಧ್ಯರಾತ್ರಿಯಾದರೂ ಅಭಿಮಾನಿಗಳ ಉತ್ಸಾಹ, ಬೆಂಬಲ ಕಂಡು ಆರ್‌ಸಿಬಿ ಆಟಗಾರರು ಹಾಗೂ ಫ್ರಾಂಚೈಸಿ ಖುಷಿಪಟ್ಟಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿದ ಆರ್‌ಸಿಬಿ ತಂಡವು ಐಪಿಎಲ್‌ 2024ರ ಪ್ಲೇಆಫ್‌ ಪ್ರವೇಶಿಸಿದೆ. ಆರ್‌ಸಿಬಿಯ ಗೆಲುವಿನ ಬೆನ್ನಲ್ಲೇ ರಾಜಧಾನಿಯ ಎಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿದೆ. ರಾತ್ರಿಯಿಡೀ ನಿದ್ದೆಗೆಟ್ಟ ಅಭಿಮಾನಿಗಳು ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.

ಮಧ್ಯರಾತ್ರಿ 1.30ರ ವೇಳೆಗೆ ಆರ್‌ಸಿಬಿ ತಂಡವು ಸ್ಟೇಡಿಯಂನಿಂದ ಹೊರಹೋಗುವಾಗಲೂ ಬೆಂಗಳೂರು ಬೀದಿಗಳಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು. ಇದನ್ನು ಕಂಡು ಆರ್‌ಸಿಬಿ ಆಟಗಾರರು ಹುಬ್ಬೇರಿಸಿದ್ದಾರೆ. ಅಲ್ಲದೆ, ಈ ಅಭಿಮಾನ ತುಂಬಾ ವಿಶೇಷ. ನಿಮ್ಮ ಬಗ್ಗೆ ಅತೀವ ಹೆಮ್ಮೆ ಇದೆ ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹೇಳಿಕೊಂಡಿದೆ.

ಶನಿವಾರ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಎರಡು ತಂಡಗಳ ಅಭಿಮಾನಿಗಳು ಜಮಾಯಿಸಿದ್ದರು. ಆದರೆ, ಪಂದ್ಯ ಮುಗಿದ ಬಳಿಕ ಆರ್‌ಸಿಬಿ ಫ್ಯಾನ್ಸ್‌ ಅಬ್ಬರವೇ ಜೋರಾಗಿತ್ತು. ಪಂದ್ಯ ಮುಗಿದ ಬಳಿಕ ಆರ್‌ಸಿಬಿ ತಂಡವು ಸ್ಟೇಡಿಯಂನಿಂದ ಹೊರಹೋಗುವಾಗ ತಡವಾಗಿತ್ತು. 1.30ರ ಸುಮಾರಿಗೆ ತಂಡದ ಆಟಗಾರರು ಬಸ್‌ನಲ್ಲಿ ಹೋಟೆಲ್‌ನತ್ತ ತೆರಳಿದರು. ಈ ವೇಳೆಯೂ ನಗರದ ಬೀದಿಗಳಲ್ಲಿ ನೆಚ್ಚಿನ ಆರ್‌ಸಿಬಿಗೆ ಅಭಿಮಾನಿಗಳ ಜೈಕಾರ ಮೊಳಗಿತು

ಮಧ್ಯರಾತ್ರಿಯಾದರೂ ಅಭಿಮಾನಿಗಳ ಬೆಂಬಲ ಕಂಡು ಆರ್‌ಸಿಬಿ ಫ್ರಾಂಚೈಸ್‌ ಖುಷಿಯಾಗಿದೆ. ಅಭಿಮಾನಿಗಳ ಸಂಭ್ರಮಾಚರಣೆಯ ವಿಡಿಯೋವನ್ನು ಆರ್‌ಸಿಬಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಇದು ಮಧ್ಯರಾತ್ರಿ 1:30ರ ದೃಶ್ಯ.‌ ಈ ಅಭಿಮಾನ ತುಂಬಾ ವಿಶೇಷ. ನಮಗೆ ವಿಶ್ವದ ಅತ್ಯುತ್ತಮ ಅಭಿಮಾನಿಗಳಿದ್ದಾರೆ. ನಮಗೆ ನಿಮ್ಮ ಬಗ್ಗೆ ಅತೀವ ಹೆಮ್ಮೆ ಇದೆ ಎಂದು ಫ್ರಾಂಚೈಸ್‌ ಬರೆದುಕೊಂಡಿದೆ. ಈ ವಿಡಿಯೋವನ್ನು ಕೂಡಾ ಅಪಾರ ಸಂಖ್ಯೆಯ ಅಭಿಮಾನಿಗಳು ವೀಕ್ಷಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಗೆ ತಿಲಕ್ ವರ್ಮ ಬಿಟ್ಟು ಶುಭಮನ್ ಗಿಲ್ ಗೆ ಮಣೆ: ಇದೆಂಥಾ ಲೆಕ್ಕಾಚಾರ

ತಂದೆ ಸಚಿನ್ ಹಾದಿಯಲ್ಲೇ ನಡೆದ ಮಗ ಅರ್ಜುನ್‌, ಕೈ ಹಿಡಿಯಲಿರುವ ಸಾನಿಯಾ ವಯಸ್ಸೆಷ್ಟು ಗೊತ್ತಾ

ಮತ್ತೆ ಬ್ಯಾಟ್‌ ಹಿಡಿಯಲು ಸಜ್ಜಾದ ಸೂರ್ಯಕುಮಾರ್‌ ಯಾದವ್: ಏಷ್ಯಾ ಕಪ್‌ ಟೂರ್ನಿಗೆ ಮುನ್ನ ಪರೀಕ್ಷೆಯಲ್ಲಿ ಪಾಸ್‌

ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ನಿಶ್ಚಿತಾರ್ಥ: ಸಚಿನ್ ಸೊಸೆಯಾಗುತ್ತಿರುವ ಸಾನಿಯಾ ಯಾರು

Rishabh Pant: ಕ್ರಿಕೆಟ್ ಆಡಲಾಗುತ್ತಿಲ್ಲ, ಅಸಹಾಯಕನಾದ ರಿಷಭ್ ಪಂತ್: ವಿಡಿಯೋ ನೋಡಿ

ಮುಂದಿನ ಸುದ್ದಿ
Show comments