ಪ್ಲೇ ಆಫ್ ಪ್ರವೇಶಿಸಿದ ಆರ್‌ಸಿಬಿಗೆ ಮಾಜಿ ಮಾಲೀಕ ವಿಜಯ್‌ ಮಲ್ಯರಿಂದ ಸ್ಪೆಷಲ್ ವಿಶ್

Sampriya
ಭಾನುವಾರ, 19 ಮೇ 2024 (13:54 IST)
Photo Courtesy Facebook
ಬೆಂಗಳೂರು: ನಿನ್ನೆ ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಅನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್‌ಗೆ ಪ್ರವೇಶಿಸಿದಕ್ಕೆ ಆರ್‌ಸಿಬಿ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ಅಭಿನಂದಿಸಿ ಪೋಸ್ಟ್ ಹಂಚಿದ್ದಾರೆ.

ಉದ್ಯಮಿ ವಿಜಯ್ ಮಲ್ಯ ಅವರು ಎಕ್ಸ್‌ನಲ್ಲಿ ಪೋಸ್ಟ್ ಹಂಚಿ  ಖುಷಿ ವ್ಯಕ್ತಪಡಿಸಿದ್ದಾರೆ. 'ಅಗ್ರ ನಾಲ್ಕರಲ್ಲಿ ಅರ್ಹತೆ ಗಳಿಸಿ ಐಪಿಎಲ್ ಪ್ಲೇಆಫ್ ತಲುಪಿದ್ದಕ್ಕಾಗಿ ಆರ್‌ಸಿಬಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿರಾಶಾದಾಯಕ ಆರಂಭದ ನಂತರ ಉತ್ತಮ ನಿರ್ಣಯ ಮತ್ತು ಕೌಶಲ್ಯವು ಗೆಲುವಿನ ಆವೇಗವನ್ನು ಸೃಷ್ಟಿಸಿದೆ. ಟ್ರೋಫಿಯ ಕಡೆಗೆ ಮುನ್ನಗ್ಗಿ ಗೆಲುವು ಸಾಧಿಸಿ ಎಂದು ಶುಭ ಹಾರೈಸಿದ್ದಾರೆ.

ನಿನ್ನೆ ನಡೆದ ಪಂದ್ಯಾಟದಲ್ಲಿ ಆರ್‌ಸಿಬಿ ಗೆಲುವಿಗಾಗಿ ಕೋಟ್ಯಂತರ ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದರು. ಇನ್ನೂ ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದ ಹಾಗೇ ಮೈದಾನದಲ್ಲಿ ಆಟಗಾಗರರು ಒಬ್ಬರನೊಬ್ಬರು ತಬ್ಬಿಕೊಂಡು ಸಂಭ್ರಮಸಿದರು. ಇನ್ನೂ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ಮಧ್ಯರಾತ್ರಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅದಲ್ಲದೆ ಆರ್‌ಸಿಬಿ ಅಭಿಮಾನಿಗಳು ಆರ್‌ಸಿಬಿ ಗೆದ್ದ ತಕ್ಷಣ ರೋಡ್ ರೋಡ್‌ನಲ್ಲಿ ಸಂಭ್ರಮಿಸಿ, ತಮ್ಮ ಖುಷಿ ಹೊರಹಾಕಿದ್ದಾರೆ.

ಇದರ ಬೆನ್ನಲ್ಲೇ ಲಂಡನ್‌ನಲ್ಲಿರುವ ಆರ್‌ಸಿಬಿ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ವಿಶೇಷ ಸಂದೇಶ ಕಳುಹಿಸಿ ಅಭಿನಂದಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹೋಗು ಬೌಲಿಂಗ್ ಮಾಡು, ಕಣ್‌ ಸನ್ನೆಯಲ್ಲೇ ಕುಲ್‌ದೀಪ್‌ಗೆ ಗದರಿದ ರೋಹಿತ್, ಎಲ್ಲರಿಗೂ ನಗುವೋ ನಗು

IND VS SA: ಟಾಸ್ ಸೋತರು ಭಾರತಕ್ಕೆ ಸವಾಲಿನ ಗುರಿ ನೀಡಿದ ದಕ್ಷಿಣ ಆಫ್ರಿಕಾ

IND vs SA: ಕೆಎಲ್ ರಾಹುಲ್ ಇಂದು ಟಾಸ್ ಗೆದ್ದಿದ್ದು ಹೇಗೆ, ಇಲ್ಲಿದೆ ರೋಚಕ ಕಹಾನಿ video

ಬೆಳಗಾವಿ ಅಧಿವೇಶನದಲ್ಲಿ ಈ ಒಂದು ವಿಚಾರ ಚರ್ಚೆಯಾಗಬೇಕು ಎಂದ ವಿಜಯೇಂದ್ರ

IND vs SA: ರನ್ ಗಾಗಿ ಪರದಾಡುತ್ತಿದ್ದ ಆಫ್ರಿಕಾ ಕಷ್ಟ ನಿವಾರಿಸಿದ ರನ್ ಮೆಷಿನ್ ಪ್ರಸಿದ್ಧ ಕೃಷ್ಣ

ಮುಂದಿನ ಸುದ್ದಿ
Show comments