ಐಪಿಎಲ್ 2022: ರಿಟೈನ್ಡ್ ಆಟಗಾರರ ಫ್ಲಾಪ್ ಶೋ

Webdunia
ಮಂಗಳವಾರ, 31 ಮೇ 2022 (08:30 IST)
ಮುಂಬೈ: ಈ ಬಾರಿ ಐಪಿಎಲ್ ಗೆ ಮೊದಲು ಎಲ್ಲಾ ಫ್ರಾಂಚೈಸಿಗಳು ಮೆಗಾ ಹರಾಜಿನಲ್ಲಿ ತಮ್ಮ ತಂಡದ ಕೀ ಆಟಗಾರರನ್ನು ಉಳಿಸಿಕೊಂಡಿದ್ದರು. ಆದರೆ ಈ ರೀತಿ ರಿಟೈನ್ಡ್ ಆದ ಆಟಗಾರರು ಎಲ್ಲರೂ ಫ್ಲಾಪ್ ಶೋ ಕೊಟ್ಟಿದ್ದು ವಿಪರ್ಯಾಸ.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ರನ್ನು ತಂಡ ಉಳಿಸಿಕೊಂಡಿತ್ತು. ಈ ಪೈಕಿ ರೋಹಿತ್, ಬುಮ್ರಾ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ಸೂರ್ಯ ಕುಮಾರ್ ಯಾದವ್ ಗಾಯದಿಂದಾಗಿ ಆಡಲೇ ಇಲ್ಲ.
ಆರ್ ಸಿಬಿ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್, ಮೊಹಮ್ಮದ್ ಸಿರಾಜ್ ರನ್ನು ಉಳಿಸಿಕೊಂಡಿತ್ತು. ಆದರೆ ಮೂವರೂ ಫಾರ್ಮ್ ನಿಂದಾಗಿ ಸರಣಿಯುದ್ದಕ್ಕೂ ಟೀಕೆಗೊಳಗಾಗಿದ್ದರು.
ಸನ್ ರೈಸರ್ಸ್ ಹೈದರಾಬಾದ್: ನಾಯಕ ಕೇನ್ ವಿಲಿಯಮ್ಸನ್ ಮಹತ್ವದ ಘಟ್ಟದಲ್ಲಿ ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದಲೇ ಹೊರನಡೆದರು. ಅಬ್ದುಲ್ ಸಮದ್ ಹೇಳಿಕೊಳ್ಳುವ ಪ್ರದರ್ಶನ ಬರಲಿಲ್ಲ. ಇದ್ದವರಲ್ಲಿ ಉಮ್ರಾನ್ ಮಲಿಕ ಗಮನ ಸೆಳೆದರು.
ಪಂಜಾಬ್ ಕಿಂಗ್ಸ್: ಪಂಜಾಬ್ ಈ ಬಾರಿ ಮಯಾಂಕ್ ಅಗರ್ವಾಲ್ ಮತ್ತು ಅರ್ಷ್ ದೀಪ್ ಸಿಂಗ್ ರನ್ನು ಉಳಿಸಿಕೊಂಡಿತ್ತು. ಆದರೆ ಇಬ್ಬರೂ ಟೂರ್ನಿಯಲ್ಲಿದ್ದರೇ ಎಂದು ಅನುಮಾನ ಮೂಡಿಸುವಷ್ಟು ಕಳಪೆ ಪ್ರದರ್ಶನ ನೀಡಿದ್ದರು.
ಚೆನ್ನೈ ಸೂಪರ್ ಕಿಂಗ್ಸ್: ಧೋನಿ, ಜಡೇಜಾ, ಋತುರಾಜ್ ಗಾಯಕ್ ವಾಡ್,ಮೊಯಿನ್ ಅಲಿ. ಹೀಗೆ ನಾಲ್ವರನ್ನು ಉಳಿಸಿಕೊಂಡಿದ್ದ ಚೆನ್ನೈಗೆ ನಾಲ್ವರೂ ಕಳಪೆ ಪ್ರದರ್ಶನದಿಂದಾಗಿ ಕೈಕೊಟ್ಟರು.
ಡೆಲ್ಲಿ ಕ್ಯಾಪಿಟಲ್ಸ್: ರಿಷಬ್ ಪಂತ್, ಪೃಥ್ವಿ ಶಾ, ಅಕ್ಸರ್ ಪಟೇಲ್, ಅನ್ ರಿಚ್ ನೋರ್ಟ್ಜೆ ಹೀಗೆ ನಾಲ್ವರನ್ನು ಉಳಿಸಿಕೊಳ್ಳಲಾಗಿತ್ತು. ಆದರೆ ಯಾರೂ ಖ್ಯಾತಿಗೆ ತಕ್ಕ ಆಟವಾಡಲೇ ಇಲ್ಲ.
ಕೆಕೆಆರ್: ಕಳೆದ ಋತುವಿನಲ್ಲಿ ಪ್ರದರ್ಶನ ಗಮನಿಸಿ ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ಸುನಿಲ್ ನರೈನ್ ರನ್ನು ಉಳಿಸಿಕೊಂಡಿದ್ದ ಕೆಕೆಆರ್ ಗೆ ನಾಲ್ವರೂ ಕೈಕೊಟ್ಟು ಲೀಗ್ ಹಂತದಲ್ಲೇ ತಂಡ ಕೂಟದಿಂದ ಹೊರಬೀಳುವಂತಾಗಿತ್ತು.
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್. ಬಹುಶಃ ರಿಟೈನ್ಡ್ ಆಟಗಾರರು ಕೈ ಹಿಡಿದಿದ್ದು ರಾಜಸ್ಥಾನ್ ಗೆ ಮಾತ್ರ. ಈ ಮೂವರೂ ಖ್ಯಾತಿಗೆ ತಕ್ಕ ಆಟವಾಡಿ ತಂಡವನ್ನು ಫೈನಲ್ ತನಕ ಕೊಂಡೊಯ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸೂರ್ಯಕುಮಾರ್ ಯಾದವ್ ನಾಯಕತ್ವಕ್ಕೂ ಸದ್ಯದಲ್ಲೇ ಕೊಕ್

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೇ ಟೀಂ ಇಂಡಿಯಾದಲ್ಲಿ ಸ್ಥಾನ ಗ್ಯಾರಂಟಿ ಇಲ್ಲ

ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇದೇ ಕಾರಣಕ್ಕೆ

ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ಟೀಂ ಇಂಡಿಯಾ ಪ್ರಕಟ: ರೋಹಿತ್ ಶರ್ಮಾ, ಕೊಹ್ಲಿ ಕಮ್ ಬ್ಯಾಕ್

ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮಾಗೆ ಕೊಕ್: ಈಡೇರದೇ ಹೋಯ್ತಾ ಆ ಕನಸು

ಮುಂದಿನ ಸುದ್ದಿ
Show comments