Publish Date: Fri, 01 Oct 2021 (12:18 IST)
Updated Date: Fri, 01 Oct 2021 (09:19 IST)
ದುಬೈ: ಐಪಿಎಲ್ 14 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಬೌಲಿಂಗ್ ಸೆನ್ಸೇಷನ್ ಹರ್ಷಲ್ ಪಟೇಲ್ ರನ್ನು ಟೀಂ ಇಂಡಿಯಾಕ್ಕೆ ತಯಾರು ಮಾಡಿಕೊಟ್ಟಿದೆ.
ಇದಕ್ಕೂ ಮೊದಲಿನ ಐಪಿಎಲ್ ಆವೃತ್ತಿಯಲ್ಲಿ ಮಿಂಚಿದ ಮೊಹಮ್ಮದ್ ಸಿರಾಜ್ ಕೆಲವೇ ದಿನಗಳಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿದ್ದರು. ಈಗಲೂ ಅವರು ತಂಡದ ಪ್ರಮುಖ ಬೌಲರ್ ಆಗಿದ್ದಾರೆ.
ಇದೀಗ ಯುವ ವೇಗಿ ಹರ್ಷಲ್ ಪಟೇಲ್ ಈ ಆವೃತ್ತಿಯಲ್ಲಿ ಮಿಂಚುತ್ತಿದ್ದು ಕೂಟದಲ್ಲಿ ಅತ್ಯಧಿಕ (26) ವಿಕೆಟ್ ಪಡೆದ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಪ್ರತೀ ಪಂದ್ಯದಲ್ಲೂ ಅವರ ಆಟ ಗಮನಿಸಿದರೆ ಶೀಘ್ರದಲ್ಲೇ ಟೀಂ ಇಂಡಿಯಾಕ್ಕೆ ಕರೆ ಪಡೆದರೂ ಅಚ್ಚರಿಯಿಲ್ಲ. ಸದ್ಯಕ್ಕೆ ಈ ಐಪಿಎಲ್ ಟೂರ್ನಿಯಲ್ಲಿ ಅವರ ಹತ್ತಿರ ಸುಳಿವ ಬೌಲರ್ ಕೂಡಾ ಯಾರೂ ಇಲ್ಲ. ತಂಡಕ್ಕೆ ಸ್ಟಾರ್ ಬೌಲರ್ ಗಳಿಲ್ಲ ಎಂಬ ಕೊರಗನ್ನೂ ಹರ್ಷಲ್ ನಿವಾರಿಸಿದ್ದಾರೆ.