Publish Date: Fri, 01 Oct 2021 (09:14 IST)
Updated Date: Fri, 01 Oct 2021 (09:16 IST)
ದುಬೈ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಹೊಸ ದಾಖಲೆ ಮಾಡಿದ್ದಾರೆ.
ಐಪಿಎಲ್ ನಲ್ಲಿ 100 ಕ್ಯಾಚ್ ಪಡೆದ ದಾಖಲೆ ಧೋನಿ ಪಾಲಾಗಿದೆ. ನಿನ್ನೆಯ ಪಂದ್ಯದಲ್ಲಿ ಅವರು ಒಟ್ಟು ಮೂರು ಕ್ಯಾಚ್ ಪಡೆದಿದ್ದರು. ಇದರೊಂದಿಗೆ ಅವರು 100 ಕ್ಯಾಚ್ ಪಡೆದ ಮೊದಲ ಆಟಗಾರ ಎಂಬ ದಾಖಲೆ ಮಾಡಿದರು.
98 ಕ್ಯಾಚ್ ಪಡೆದಿರುವ ಸುರೇಶ್ ರೈನಾ ಎರಡನೇ ಸ್ಥಾನದಲ್ಲಿ ಮತ್ತು 94 ಕ್ಯಾಚ್ ಪಡೆದ ಮುಂಬೈ ಇಂಡಿಯನ್ಸ್ ಆಟಗಾರ ಕಿರನ್ ಪೊಲ್ಲಾರ್ಡ್ ಮೂರನೇ ಸ್ಥಾನದಲ್ಲಿದ್ದಾರೆ.