Select Your Language

Notifications

webdunia
webdunia
webdunia
webdunia

ಐಪಿಎಲ್ 14 ರ ಕೊನೆಯ ಎರಡು ಲೀಗ್ ಪಂದ್ಯಗಳಲ್ಲಿ ಬದಲಾವಣೆ

ಐಪಿಎಲ್ 14 ರ ಕೊನೆಯ ಎರಡು ಲೀಗ್ ಪಂದ್ಯಗಳಲ್ಲಿ ಬದಲಾವಣೆ
ದುಬೈ , ಗುರುವಾರ, 30 ಸೆಪ್ಟಂಬರ್ 2021 (12:03 IST)
ದುಬೈ: ಐಪಿಎಲ್ 14 ರ ಕೊನೆಯ ಎರಡು ಲೀಗ್ ಪಂದ್ಯಗಳ ಸಮಯದಲ್ಲಿ ಬದಲಾವಣೆಯಾಗಿದೆ. ಈ ಬಗ್ಗೆ ಬಿಸಿಸಿಐ ಪ್ರಕಟಣೆ ಹೊರಡಿಸಿದೆ. ಇದಕ್ಕೆ ಕಾರಣವೂ ಇದೆ.


ಕೊನೆಯ ಲೀಗ್ ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಅಪರಾಹ್ನ 3.30 ಕ್ಕೆ ಹಾಗೂ ಸಂಜೆ 7.30 ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಮುಖಾಮುಖಿಯಾಗಲಿದೆ.

ಆದರೆ ಈಗ ಎರಡೂ ಪಂದ್ಯಗಳು 7.30 ಕ್ಕೆ ನಡೆಯಲಿದೆ. ಇದಕ್ಕೆ ಕಾರಣ ಮುಂಬರುವ ಐಪಿಎಲ್ ನಲ್ಲಿ ಬಿಸಿಸಿಐ ಎರಡು ಪಂದ್ಯಗಳನ್ನು ಒಂದೇ ಸಮಯದಲ್ಲಿ ಆಯೋಜಿಸುವ ಬಗ್ಗೆ ಚಿಂತನೆ ನಡೆಸಿದೆ. ಇದಕ್ಕೆ ಯೋಜನೆ ರೂಪಿಸಲು ಈಗಲೇ ಈ ಪ್ರಯೋಗ ನಡೆಸಲು ಮುಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಪ್ಲೇ ಆಫ್ ಗೇರಲು ಆರ್ ಸಿಬಿಗೆ ಇನ್ನೊಂದೇ ಮೆಟ್ಟಿಲು