Select Your Language

Notifications

webdunia
webdunia
webdunia
webdunia

ಐಪಿಎಲ್ 14: ಪ್ಲೇ ಆಫ್ ಗೇರಲು ಆರ್ ಸಿಬಿಗೆ ಇನ್ನೊಂದೇ ಮೆಟ್ಟಿಲು

ಐಪಿಎಲ್ 14: ಪ್ಲೇ ಆಫ್ ಗೇರಲು ಆರ್ ಸಿಬಿಗೆ ಇನ್ನೊಂದೇ ಮೆಟ್ಟಿಲು
ದುಬೈ , ಗುರುವಾರ, 30 ಸೆಪ್ಟಂಬರ್ 2021 (08:45 IST)
ದುಬೈ: ಐಪಿಎಲ್ 14 ರಲ್ಲಿ ಪ್ಲೇ ಆಫ್ ಗೇರಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನೊಂದೇ ಪಂದ್ಯದಲ್ಲಿ ಗೆಲುವು ಸಿಕ್ಕಿದರೂ ಸಾಕಾಗಿದೆ.


ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನ್ ತಂಡದ ವಿರುದ್ಧ ಸರ್ವಾಂಗೀಣ ಪ್ರದರ್ಶನವಿತ್ತ ಆರ್ ಸಿಬಿ 7 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು.ಆರಂಭಿಕರು 77 ರನ್ ಗಳ ಜೊತೆಯಾಟವಾಡಿದರೂ ಆ ಅಬ್ಬರವನ್ನು ಕೊನೆಯವರೆಗೆ ಉಳಿಸಲು ರಾಜಸ್ಥಾನ್ ವಿಫಲವಾಯಿತು.  ಮತ್ತೆ ಅತ್ಯುತ್ತಮ ದಾಳಿ ನಡೆಸಿದ ಹರ್ಷಲ್ ಪಟೇಲ್ 3 ವಿಕೆಟ್ ಕಬಳಿಸಿದರೆ ಯಜುವೇಂದ್ರ ಚಾಹಲ್ 4 ಓವರ್ ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಕಬಳಿಸಿದರು. ಇನ್ನೆರಡು ವಿಕೆಟ್ ಶಹಬಾಜ್ ಅಹಮ್ಮದ್ ಪಾಲಾಯಿತು.

ಈ ಮೊತ್ತ ಬೆನ್ನತ್ತಿದ್ದ ಆರ್ ಸಿಬಿ 17.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ವಿಜಯಿಯಾಯಿತು. ನಾಯಕ ವಿರಾಟ್ ಕೊಹ್ಲಿ 25, ದೇವದತ್ತ್ ಪಡಿಕ್ಕಲ್ 22, ಎಸ್. ಭರತ್ 44, ಗ್ಲೆನ್ ಮ್ಯಾಕ್ಸ್ ವೆಲ್ ಅಜೇಯ 50 ರನ್ ಸಿಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿ ವಿರುದ್ಧ ಬಿಸಿಸಿಐಗೆ ದೂರಿದ್ದು ಅಶ್ವಿನ್ ಮಾತ್ರವಲ್ಲ! ಈ ಆಟಗಾರರೂ ಶಾಮೀಲು!