ಹೈದರಾಬಾದ್: ಇಶಾನ್ ಕಿಶನ್ ಅವರ ಸಿಡಿಲಬ್ಬರದ ಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು 44 ರನ್‌ಗಳಿಂದ ಮಣಿಸಿ ಶುಭಾರಂಭ ಮಾಡಿತು.
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ನ್ ರೈಸರ್ಸ್ ತಂಡ ಇಶಾನ್ ಕಿಶನ್ ಸಿಡಿಸಿದ ಶತಕದ (106) ನೆರವಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 286 ರನ್ ಗಳನ್ನು ಕಲೆಹಾಕಿತು. 287 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು, 242 ರನ್‌ಗಳನ್ನು ಕಲೆಹಾಕಿ ಸೋಲು ಕಂಡಿತು.
ರಾಜಸ್ಥಾನ ಪರ ಧ್ರುವ್ ಜುರೆಲ್ 35 ಎಸೆತಗಳಲ್ಲಿ 70 ರನ್, ಸಂಜು ಸ್ಯಾಮ್ಸನ್ 37 ಎಸೆತಗಳಲ್ಲಿ 66 ರನ್ ಕಲೆ ಹಾಕಿದರು. ಸನ್ ರೈಸರ್ಸ್ ಪರ ಸಿಮರ್ಜೀತ್ ಸಿಂಗ್ 2 ವಿಕೆಟ್, ಹರ್ಷಲ್ ಪಟೇಲ್ 2 ವಿಕೆಟ್, ಆಡಮ್ ಝಂಪಾ ಹಾಗೂ ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಸನ್ ರೈಸರ್ಸ್ ತಂಡದ ಪರ ಇಶಾನ್ ಕಿಶಾನ್ ಕೇವಲ 47 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 106 ರನ್ ಗಳಿಸಿ ಮಿಂಚಿದರು. ಆರಂಭಿಕ ಆಟಗಾರ ಟ್ರಾವಿಸ್ ಹೆಡ್ 67 ರನ್, ನಿತೀಶ್ ಕುಮಾರ್ ರೆಡ್ಡಿ 30 ರನ್, ಹೆನ್ರಿಚ್ ಕ್ಲಾಸೆನ್ 34 ರನ್ ಗಳಿಸಿದರು. ರಾಜಸ್ಥಾನ ಪರ ತುಷಾರ್ ದೇಶಪಾಂಡೆ 3 ವಿಕೆಟ್, ಮಹೀಶ್ ತೀಕ್ಷಣ 2 ವಿಕೆಟ್, ಸಂದೀಪ್ ಶರ್ಮಾ 1 ವಿಕೆಟ್ ಗಳಿಸಿದರು.