Select Your Language

Notifications

webdunia
webdunia
webdunia
webdunia

ಕನ್ನಡಿಗ ರಾಹುಲ್‌ ಬೊಂಬಾಟ್‌ ಆಟ: ಡೆಲ್ಲಿ ಕ್ಯಾಪಿಟಲ್ಸ್‌ಗೆ ಹ್ಯಾಟ್ರಿಕ್‌ ಗೆಲುವು, ಚೆನ್ನೈಗೆ ಹ್ಯಾಟ್ರಿಕ್‌ ಸೋಲು

Indian Premier League, Chennai Super Kings, Delhi Capitals

Sampriya

ಚೆನ್ನೈ , ಶನಿವಾರ, 5 ಏಪ್ರಿಲ್ 2025 (19:27 IST)
Photo Courtesy X
ಚೆನ್ನೈ: ಇಂಡಿಯನ್‌ ಪ್ರೀಮಿಯಲ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ತವರಿನಲ್ಲಿ ಮತ್ತೆ ಮುಗ್ಗರಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವು 25 ರನ್‌ಗಳಿಂದ ಚೆನ್ನೈ ತಂಡವನ್ನು ಮಣಿಸಿತು.

ಅಕ್ಷರ್ ಪಟೇಲ್ ಸಾರಥ್ಯದ ಪಿಟಲ್ಸ್ ಹ್ಯಾಟ್ರಿಕ್ ಗೆಲುವು ದಾಖಲಿಸಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದರೆ, ಋತುರಾಜ್‌ ಗಾಯಕವಾಡ್‌ ನಾಯಕತ್ವದ ಚೆನ್ನೈ ತಂಡವು ಹ್ಯಾಟ್ರಿಕ್‌ ಸೋಲು ಅನುಭವಿಸಿತು. ಟೂರ್ನಿಯ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದಗಾಯಕವಾಡ್ ಬಳಗವು ಬಳಿಕದ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ.

ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ, ಕೆ.ಎಲ್.ರಾಹುಲ್ ಅಮೋಘ ಅರ್ಧಶತಕದ (77) ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 183 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಇದಕ್ಕೂ ಮೊದಲು ಕನ್ನಡಿಗ ಕೆ.ಎಲ್.ರಾಹುಲ್ ಅಮೋಘ ಅರ್ಧಶತಕದ (77) ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ಗುರಿ ಬೆನ್ನಟ್ಟಿದ ಚೆನ್ನೈ ಐದು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಲಷ್ಟೇ ಸಾಧ್ಯವಾಯಿತು. ವಿಜಯ್ ಶಂಕರ್ ಅಜೇಯ 69 ರನ್ ಗಳಿಸಿದರು. ಅನುಭವಿ ಮಹೇಂದ್ರ ಸಿಂಗ್ 30 ರನ್ ಗಳಿಸಿ ಔಟಾಗದೆ ಉಳಿದರು.

ರಚಿನ್ ರವೀಂದ್ರ (3), ನಾಯಕ ಋತುರಾಜ್ ಗಾಯಕವಾಡ್ (5), ಡೆವೂನ್ ಕಾನ್ವೆ (13), ಶಿವಂ ದುಬೆ (18) ಹಾಗೂ ರವೀಂದ್ರ ಜಡೇಜ (2) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ಕೆ: ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿ ಶ್ರೇಯಸ್‌ ಬಳಗ