Publish Date: Tue, 16 Dec 2025 (14:12 IST)
Updated Date: Tue, 16 Dec 2025 (14:15 IST)
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮಿನಿ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 2.30ಕ್ಕೆ ಬಿಡ್ಡಿಂಗ್ ಆರಂಭವಾಗಿದೆ. ಯಾರಿಗೆ ಜಾಕ್‌ಪಾಟ್ ಒಲಿಯಲಿದೆ ಎಂಬುದೇ ಸದ್ಯದ ಕುತೂಹಲ.
ಬಿಡ್ಡಿಂಗ್‌ನಲ್ಲಿ ಒಟ್ಟು 359 ಮಂದಿ ಆಟಗಾರರಿದ್ದಾರೆ. ಹತ್ತು ಫ್ರಾಂಚೈಸಿಗಳ ಪರ್ಸ್‌ನಲ್ಲಿ ಒಟ್ಟು ₹237.55 ಕೋಟಿ ಹಣವಿದ್ದು, ಅದರಲ್ಲಿ 77 ಆಟಗಾರರ ಖರೀದಿಗೆ ಕಸರತ್ತು ನಡೆಸಲಿವೆ.
ಕೋಲ್ಕತ್ತ ನೈಟ್ ರೈಡರ್ಸ್ ಪರ್ಸ್‌ನಲ್ಲಿ ₹64.30 ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ್ಸ್‌ನಲ್ಲಿ ₹43.40 ಕೋಟಿ ಹಣವಿದ್ದು, ಈ ತಂಡಗಳು ತಾರಾ ಆಟಗಾರರ ಮೇಲೆ ಕಣ್ಣಿಟ್ಟಿವೆ.
ಕಳೆದ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರಾನ್ ಗ್ರೀನ್ ಅವರು ಬಿಡ್‌ನಲ್ಲಿ ಅತಿ ಹೆಚ್ಚು ಮೌಲ್ಯ ಪಡೆಯುವ ನಿರೀಕ್ಷೆಯಿದೆ. ಅಲ್ಲದೆ, ಭಾರತದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್, ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟೋನ್‌ರಂತಹ ತಾರಾ ಆಟಗಾರರು ರೇಸ್‌ನಲ್ಲಿದೆ.
ಇಂಗ್ಲೆಂಡ್‌ನ ಲಿವಿಂಗ್‌ಸ್ಟೋನ್ ಅಲ್ಲದೇ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಅವರೂ ಉತ್ತಮ ಮೊತ್ತ ಪಡೆಯುವ ಸಾಧ್ಯತೆ ಇದೆ.
ಹೊಸ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಮುಕುಲ್ ಚೌಧರಿ ಫ್ರಾಂಚೈಸಿಗಳನ್ನು ಆಕರ್ಷಿಸಲಿದ್ದಾರೆ. ಕಡಿಮೆ ಮೂಲಬೆಲೆ ಹೊಂದಿರುವ ಪೃಥ್ವಿ ಶಾ ಮತ್ತು ಸರ್ಫರಾಜ್ ಖಾನ್ (ತಲಾ ₹75 ಲಕ್ಷ) ಅವರಿಗೂ ಜಾಕ್‌ಪಾಟ್ ಒಲಿಯಲಿದೆ.
ಯಾರ ಪರ್ಸ್‌ನಲ್ಲಿ ಎಷ್ಟು ಹಣ?: ಕೋಲ್ಕತ್ತ ನೈಟ್‌ರೈಡರ್ಸ್; ₹ 64.30ಕೋಟಿ, ಚೆನ್ನೈ ಸೂಪರ್ ಕಿಂಗ್ಸ್ ₹ 43.40 ಕೋಟಿ, ಸನ್‌ರೈಸರ್ಸ್ ಹೈದರಾಬಾದ್ ₹ 25.50 ಕೋಟಿ, ಲಖನೌ ಸೂಪರ್ ಜೈಂಟ್ಸ್ ₹ 22.95 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್ ₹ 21.80 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ₹ 16.40ಕೋಟಿ, ರಾಜಸ್ಥಾನ ರಾಯಲ್ಸ್ ₹ 16.05 ಕೋಟಿ, ಗುಜರಾತ್ ಟೈಟನ್ಸ್ ₹ 12.90 ಕೋಟಿ, ಪಂಜಾಬ್ ಕಿಂಗ್ಸ್ ₹ 11.50ಕೋಟಿ,
ಮುಂಬೈ ಇಂಡಿಯನ್ಸ್ ₹ 2.75ಕೋಟಿ.
ಇಂದು ಮಧ್ಯಾಹ್ನ 2.30ಕ್ಕೆ ಹರಾಜು ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೊ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರವಿದೆ.