Publish Date: Mon, 16 Mar 2020 (09:07 IST)
Updated Date: Mon, 16 Mar 2020 (09:08 IST)
ಮುಂಬೈ: ಕೊರೋನಾವೈರಸ್ ಭೀತಿಯಿಂದಾಗಿ ಐಪಿಎಲ್ 13 ನೇ ಆವೃತ್ತಿಯನ್ನು ಏಪ್ರಿಲ್ 15 ರವರೆಗೆ ಬಿಸಿಸಿಐ ಮುಂದೂಡಿತ್ತು. ಆದರೆ ಐಪಿಎಲ್ ಆರಂಭ ಯಾವಾಗ ಎಂಬ ಪ್ರಶ್ನೆಗೆ ಉತ್ತರ ನೀಡಿರಲಿಲ್ಲ.
ಮೂಲಗಳ ಪ್ರಕಾರ ಐಪಿಎಲ್ ಆರಂಭಿಸಲು ಬಿಸಿಸಿಐ ಒಟ್ಟು ಐದು ಸಂಭಾವ್ಯ ದಿನಾಂಕಗಳನ್ನು ನಿಗದಿಪಡಿಸಿದೆ ಎನ್ನಲಾಗಿದೆ. ಗಂಗೂಲಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ.
ಏಪ್ರಿಲ್ 15, ಏಪ್ರಿಲ್ 21, ಏಪ್ರಿಲ್ 25, ಮೇ 1 ಮತ್ತು ಮೇ 5 ರ ದಿನವನ್ನು ಬಿಸಿಸಿಐ ಗುರುತು ಹಾಕಿಕೊಂಡಿದೆ. ಈ ಪೈಕಿ ಪರಿಸ್ಥಿತಿ ನೋಡಿಕೊಂಡು ಯಾವ ದಿನ ಐಪಿಎಲ್ ಆರಂಭಿಸಬೇಕೆಂದು ನಿರ್ಧಾರ ಮಾಡಲಿದೆ.