ಇಂದಿನಿಂದ ಐಪಿಎಲ್ ಕ್ರಿಕೆಟ್ ಹಬ್ಬ ಆರಂಭ ಆಗಲಿದ್ದು,ಭಾನುವಾರ ಆರ್ ಸಿ ಬಿ ಹಾಗೂ  ಮುಂಬಯಿ ಮ್ಯಾಚ್ ಹಿನ್ನೆಲೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿಕೆಟ್ ಗಾಗಿ ಜನರು ಮುಗಿಬಿದ್ದಿದ್ದಾರೆ.ಬೆಳ್ಳಿಗ್ಗೆ ೬ ಗಂಟೆಗೆ ಬಂದು ಅಭಿಮಾನಿಗಳು ಟಿಕೆಟ್ ತೆಗೆದುಕೊಳ್ಳುತ್ತಿದ್ದಾರೆ.ಕಿಲೋಮೀಟರ್ ಗಟ್ಟಲೆ  ಕ್ರಿಕೆಟ್ ಪ್ಯಾನ್ಸ್ ಕ್ಯೂ ನಿಂತಿದ್ದಾರೆ.ಟಿಕೆಟ್ ಗೆ ಪಡೆಯಲು ಸಾವಿರಾರು ಜನರು ಕ್ಯೂ ನಿಂತಿದ್ದಾರೆ.
 
 			
 
 			
			                     
							
							
			        							
								
																	
									
										
								
																	ನೆನ್ನೆ ಸಂಜೆಯಿಂದಲೇ ಟಿಕೆಟ್ ಗಾಗಿ ಜನರು ಬರುತ್ತಿದ್ದು,ಏಪ್ರಿಲ್ ೨ ರಂದು ಆರ್ ಸಿ ಬಿ ಹಾಗೂ ಮುಂಬೈ ಮ್ಯಾಚ್ ಹಿನ್ನೆಲೆ ಸುಮಾರು ೫ ಕಿಲೋಮೀಟರ್ ಗೂ ೧೧ ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಂದ ಕ್ಯೂ ನಿಲ್ಲಲಾಗಿದ್ದು,ಜಿದ್ದಾಜಿದ್ದಿನ ಮ್ಯಾಚ್ ಅಗಿರುವುದರಿಂದ ಟಿಕೆಟ್ ಗೆ ಬೇಡಿಕೆ ಹೆಚ್ಚಿದೆ.ನೆನ್ನೆ ರಾತ್ರಿ ಬಂದಿರುವ ಅಭಿಮಾನಿಗಳನ್ನು ಪೊಲೀಸರು ಮನೆಗೆ ಕಳುಹಿಸಿದ್ದಾರೆ.ಚಾಪೆ ದಿಂಬು ಹಾಸಿಗೆ ಸಮೇತ ಅಭಿಮಾನಿಗಳು ರಾಜ್ಯದ ವಿವಿಧ ಭಾಗಗಳಾದ ಹುಬ್ಬಳ್ಳಿ. ಬಳ್ಳಾರಿ.ಚಿತ್ರದುರ್ಗ ಬೆಳಗಾವಿ. ಮೈಸೂರು.ಹಾಸನ.ಹೀಗೆ ನಾನಾ ಭಾಗದಿಂದ ಬಂದಿದ್ದಾರೆ.ಇಂದು ಬೆಳ್ಳಿಗ್ಗೆ 10.30  ರ ಸಮಾರಿಗೆ ಟಿಕೆಟ್ ಲಭ್ಯವಾಗಿದ್ದು,ಒಂದು ಟಿಕೆಟ್ ಬೆಲೆ ಸುಮಾರು 1250 ರಿಂದ 1400 ರೂ ನಿಗದಿಯಾಗಿದೆ.
	 
	ಅಭಿಮಾನಿಗಳನ್ನು ಹರಸಾಹಸ ಮಾಡಿ ಪೊಲೀಸರು ನಿಯಂತ್ರಣ ಮಾಡುತ್ತಿದ್ದಾರೆ.ಆರ್ ಸಿ ಬಿ ಎಂದು ಘೋಷಣೆ ಕೂಗಿ ಅಭಿಮಾನವನ್ನ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.