Publish Date: Wed, 03 Jan 2018 (15:57 IST)
Updated Date: Wed, 03 Jan 2018 (15:59 IST)
ಚೆನ್ನೈ: ಈ ವರ್ಷದ ಐಪಿಎಲ್ ಹರಾಜು ಪ್ರಕ್ರಿಯೆಗೆ ಮೊದಲು ಹಳೇ ಆಟಗಾರರನ್ನು ಉಳಿಸಿಕೊಳ್ಳಲು ನಾಳೆ ಫ್ರಾಂಚೈಸಿಗಳಿಗೆ ಕೊನೇ ದಿನವಾಗಿದೆ. ಈ ವರ್ಷ ನಿಷೇಧ ಶಿಕ್ಷೆ ಮುಗಿಸಿ ಕಣಕ್ಕೆ ಮರಳಿರುವ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಹಳೆಯ ನಾಯಕ ಧೋನಿ, ಸುರೇಶ್ ರೈನಾರನ್ನು ಉಳಿಸಿಕೊಂಡಿದೆ.
ಧೋನಿ ಮತ್ತೆ ಚೆನ್ನೈಗೆ ಮರಳಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಸುರೇಶ್ ರೈನಾರನ್ನು ಕೈ ಬಿಡುತ್ತಾರೆಂಬ ಗಾಳಿ ಸುದ್ದಿಗಳಿದ್ದರೂ ಸಿಎಸ್ ಕೆ ಅವರನ್ನೂ ಉಳಿಸಿಕೊಂಡಿದೆ. ಆದರೆ ಮೂರನೇ ಆಟಗಾರ ಯಾರು ಎಂಬುದನ್ನು ಇನ್ನೂ ಸಸ್ಪೆನ್ಸ್ ನಲ್ಲಿಡಲಾಗಿದೆ.
ಮುಂಬೈ ಇಂಡಿಯನ್ಸ್ ಕೂಡಾ ತನ್ನ ಚಾಂಪಿಯನ್ ನಾಯಕ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಸಹೋದರರನ್ನು ಉಳಿಸಿಕೊಳ್ಳುವುದಾಗಿ ಹೇಳಿಕೊಂಡಿತ್ತು. ಉಳಿದ ತಂಡಗಳು ತಮ್ಮ ಯಾವೆಲ್ಲಾ ಆಟಗಾರರನ್ನು ಉಳಿಸಿಕೊಳ್ಳುತ್ತಾರೆ ಎಂಬುದು ನಾಳೆಯ ವೇಳೆಗೆ ಸ್ಪಷ್ಟವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ