Webdunia - Bharat's app for daily news and videos

Install App

IPL 2025: ಈಡನ್‌ನಲ್ಲಿ ಕೊನೆಯ ಪಂದ್ಯದಲ್ಲಿ ಮಿಂಚಿದ ಧೋನಿ: ಕೋಲ್ಕತ್ತ ವಿರುದ್ಧ ಚೆನ್ನೈ ತಂಡಕ್ಕೆ ರೋಚಕ ಜಯ

Sampriya
ಬುಧವಾರ, 7 ಮೇ 2025 (23:23 IST)
ಕೋಲ್ಕತ್ತ: ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ಈಡನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಅತ್ಯುತ್ತಮ ಫಿನಿಷಿಂಗ್‌ ಮಾಡಿದರು. ಅವರ ಆಟದ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಎರಡು ವಿಕೆಟ್‌ಗಳಿಂದ ಗೆದ್ದಿತ್ತು.

ಹಾಕಿ ಚಾಂಪಿಯನ್‌ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡಕ್ಕೆ ಇದು ಮಹತ್ವದ ಪಂದ್ಯವಾಗಿತ್ತು. ಈ ಪಂದ್ಯ ಗೆದ್ದಿದ್ದರೆ ಮಾತ್ರ ಪ್ಲೇ ಆಫ್‌ ಕನಸು ಜೀವಂತವಾಗಿ ಉಳಿಯುತ್ತಿತ್ತು. ಈ ಸೋಲಿನೊಂದಿಗೆ ಪ್ಲೇ ಆಫ್‌ ರೇಸ್‌ನಿಂದ ಕೋಲ್ಕತ್ತ ತಂಡವು ಹೊರಬಿದ್ದಿದೆ.

12 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವೂ ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಕೋಲ್ಕತ್ತ ತಂಡವು 12 ಪಂದ್ಯಗಳಲ್ಲಿ ಐದರಲ್ಲಿ ಗೆದ್ದು, ಒಟ್ಟು 11 ಅಂಕ ಗಳಿಸಿದೆ.

ಮೊದಲು ಬ್ಯಾಟ್‌ ಮಾಡಿದ ಕೋಲ್ಕತ್ತ ತಂಡವು 6 ವಿಕೆಟ್‌ಗೆ 179 ರನ್‌ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡವು ಎರಡು ಎಸೆತ ಬಾಕಿ ಇರುವಂತೆ 8 ವಿಕೆಟ್‌ಗೆ 183 ರನ್‌ ಗಳಿಸಿ ಸಂಭ್ರಮಿಸಿತು. ಧೋನಿ ಕೊನೆಯಲ್ಲಿ ಅಜೇಯ 17 ರನ್‌ ಗಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.

43 ವರ್ಷ ವಯಸ್ಸಿನ ಧೋನಿ ಅವರಿಗೆ ಕೋಲ್ಕತ್ತ ಜೊತೆ ಭಾವನಾತ್ಮಕ ನಂಟು ಇದೆ. ಕೋಲ್ಕತ್ತ ಅವರ ಪತ್ನಿಯ ತವರು. ಈ ಮಹಾನಗರದಲ್ಲೇ ಅವರು ಜೂನಿಯರ್‌, ಕ್ಲಬ್ ಕ್ರಿಕೆಟ್‌ ಆಡಿ ಬೆಳೆದವರು. ಹೀಗಾಗಿ ಬುಧವಾರ ಪಂದ್ಯ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಈಡನ್‌ನಲ್ಲಿ ಅವರು ಮೈಲಿಗಲ್ಲಿನ ಕ್ಷಣಗಳನ್ನೂ ಕಂಡಿದ್ದಾರೆ. ಮೊದಲ ಪ್ರಥಮ ದರ್ಜೆ ಶತಕ ಬಾರಿಸಿದ್ದು ಇಲ್ಲಿಯೇ. ಆರು ಟೆಸ್ಟ್‌ ಶತಕಗಳ ಪೈಕಿ ಎರಡನ್ನು ಇದೇ ಕ್ರೀಡಾಂಗಣದಲ್ಲಿ ಬಾರಿಸಿದ್ದಾರೆ. ಶಾಮಬಜಾರ್‌ ಕ್ಲಬ್‌ ಪರ ಪಿ.ಸೇನ್‌ ಟ್ರೋಫಿ ಕ್ರಿಕೆಟ್‌ ಫೈನಲ್ ಕೂಡ ಆಡಿದ್ದಾರೆ. ಏಳನೇ ನಂಬರ್ ಪೋಷಾಕು ಧರಿಸಿ ಕೊನೆಯ ಬಾರಿ ಈ ಚಾರಿತ್ರಿಕ ಕ್ರೀಡಾಂಗಣದಲ್ಲಿ ಇಳಿದು, ತಂಡವನ್ನು ಗೆಲುವಿನ ದಡ ಸೇರಿಸಿ ಸಂಭ್ರಮಿಸಿದರು.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಈಡನ್‌ನಲ್ಲಿ ಕೊನೆಯ ಪಂದ್ಯದಲ್ಲಿ ಮಿಂಚಿದ ಧೋನಿ: ಕೋಲ್ಕತ್ತ ವಿರುದ್ಧ ಚೆನ್ನೈ ತಂಡಕ್ಕೆ ರೋಚಕ ಜಯ

Operation Sindoor: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಧರ್ಮಶಾಲಾದ ಐಪಿಎಲ್‌ ಪಂದ್ಯ ಮುಂಬೈಗೆ ಸ್ಥಳಾಂತರ

Rohit Sharma Retirement: ನಾಯಕತ್ವದಿಂದ ಕೆಳಗಿಳಿಸಿದ ಬೆನ್ನಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ರೋಹಿತ್ ಶರ್ಮಾ

Virat Kohli: ವಿರಾಟ್ ಕೊಹ್ಲಿ ಕಟೌಟ್ ಮುಂದೆ ಕುರಿ ಕಡಿದ ಫ್ಯಾನ್ಸ್ ಅರೆಸ್ಟ್

Rohit Sharma: ರೋಹಿತ್ ಶರ್ಮಾ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಟೀಂ ಇಂಡಿಯಾ ಹಿರಿಯ ಆಟಗಾರ

ಮುಂದಿನ ಸುದ್ದಿ
Show comments