Select Your Language

Notifications

webdunia
webdunia
webdunia
webdunia

IPL 2025: ಚೆನ್ನೈ ತಂಡದ ಮಹಾ ಎಡವಟ್ಟು: ನಿಯಮ ಮರೆತು ಪಂದ್ಯ ಸೋತ ಧೋನಿ ಪಡೆ

Indian Premier League, Royal Challengers Bangalore, Chennai Super Kings

Sampriya

ಬೆಂಗಳೂರು , ಭಾನುವಾರ, 4 ಮೇ 2025 (12:16 IST)
Photo Courtesy X
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಐಪಿಎಲ್‌ ನಿಯಮವನ್ನು ಮರೆತು ಮಹಾ ಎಡವಟ್ಟು ಮಾಡಿಕೊಂಡಿದೆ. ಇದಕ್ಕಾಗಿ ಪಂದ್ಯವನ್ನೇ ಸೋಲಬೇಕಾಯಿತು. ಇದು ಅಚ್ಚರಿಯಾದೂ ಸತ್ಯ.

ಚೆನ್ನೈ ತಂಡದ ಗೆಲುವಿಗೆ ಕೊನೆಯ 22 ಎಸೆತಗಳಲ್ಲಿ 42 ರನ್‌ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಡೆವಾಲ್ಡ್ ಬ್ರೆವಿಸ್ ಲುಂಗಿ ಎನ್​ಗಿಡಿ ಎಸೆತದಲ್ಲಿ ಎಲ್​ಬಿ ಆಗಿದ್ದರು. ಆರ್​ಸಿಬಿ ಆಟಗಾರರ ಮನವಿಗೆ ಅಂಪೈರ್ ಎಲ್​ಬಿಡಬ್ಲ್ಯೂ ಔಟ್ ನೀಡಿದರು. ಆದರೆ ನಿಯಮ ಗೊತ್ತಿಲ್ಲದೆ ಬ್ಯಾಟರ್​ಗಳು ರನ್ ಕದಿಯಲು ಓಡಿದ್ದು ಸಿಎಸ್​ಕೆ ಪಾಲಿಗೆ ದುಬಾರಿಯಾಯಿತು.

ನಿಯಮದ ಪ್ರಕಾರ, ಎಲ್​ಬಿಡಬ್ಲ್ಯೂ ಆದರೆ 15 ಸೆಕೆಂಡ್​ಗಳ ಒಳಗೆ ಡಿಆರ್​ಎಸ್​ಗೆ ಮನವಿ ಸಲ್ಲಿಸಬೇಕು. ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ, ಮನವಿಯನ್ನು ತಿರಸ್ಕರಿಸಲಾಗುತ್ತದೆ. ಆದರೆ ಈ ನಿಯಮದ ಬಗ್ಗೆ ಅರಿವಿಲ್ಲದೆ, ಡೆವಾಲ್ಡ್ ಬ್ರೆವಿಸ್ ಹಾಗೂ ರವೀಂದ್ರ ಜಡೇಜಾ 2 ರನ್ ಓಡಿದ್ದಾರೆ.

ಅದರಲ್ಲೂ ಒಂದು ರನ್ ಕಲೆಹಾಕಿದ ಬಳಿಕ ಡಿಆರ್​ಎಸ್​ಗೆ ಮನವಿ ಸಲ್ಲಿಸಿದ್ದರೂ ಬ್ರೆವಿಸ್​ ಅವರಿಗೆ ರಿವ್ಯೂ ಲಭಿಸುತ್ತಿತ್ತು. ಇದರ ಪರಿಕಲ್ಪನೆಯೇ ಇಲ್ಲದೆ, ರವೀಂದ್ರ ಜಡೇಜ ಡೆವಾಲ್ಡ್ ಬ್ರೆವಿಸ್ ಅವರನ್ನು 2ನೇ ರನ್​ಗಾಗಿ ಕರೆದಿದ್ದಾರೆ. ಇತ್ತ ಕಡೆಯಿಂದ ಸ್ಟ್ರೈಕ್​ನತ್ತ ಓಡಿದ ಬ್ರೆವಿಸ್ ಆ ಬಳಿಕ ಜಡೇಜಾ ಜೊತೆ ಚರ್ಚಿಸಿ ಡಿಆರ್​ಎಸ್​ಗೆ ಮನವಿ ಸಲ್ಲಿಸಿದ್ದಾರೆ.

ಅಷ್ಟರಲ್ಲಾಗಲೇ ಟೈಮರ್ 25 ಸೆಕೆಂಡ್​ಗಳನ್ನು ದಾಟಿತ್ತು. ಅಂದರೆ 15 ಸೆಕೆಂಡ್​ಗಳಲ್ಲಿ ತೆಗೆದುಕೊಳ್ಳಬೇಕಾದ ರಿವ್ಯೂ ಅನ್ನು ಬ್ರೆವಿಸ್ 25 ಸೆಕೆಂಡ್​ಗಳ ಬಳಿಕ ತೆಗೆದುಕೊಂಡಿದ್ದಾರೆ. ಹೀಗಾಗಿ ಅಂಪೈರ್ ಮನವಿಯನ್ನು ತಿರಸ್ಕರಿಸಿದರು. ಇದರಿಂದಾಗಿ ಡೆವಾಲ್ಡ್ ಬ್ರೆವಿಸ್ ಮೇಲ್ಮನವಿ ಇಲ್ಲದೆ ಪೆವಿಲಿಯನ್​ಗೆ ಹಿಂತಿರುಗಬೇಕಾಯಿತು. ಕುತೂಹಲಕಾರಿ ವಿಷಯ ಎಂದರೆ ಅದು ನಾಟೌಟ್ ಆಗಿತ್ತು. ಅಂದರೆ ರಿಪ್ಲೇ ವಿಡಿಯೋದಲ್ಲಿ ಡೆವಾಲ್ಡ್ ಬ್ರೆವಿಸ್ ಕಾಲಿಗೆ ತಾಗಿದ ಚೆಂಡು ವಿಕೆಟ್​ನಿಂದ ದೂರ ಸಾಗುತ್ತಿರುವುದು ಕಂಡು ಬಂದಿದೆ.

ಆರ್‌ಸಿಬಿ ತಂಡವು 5 ವಿಕೆಟ್ ನಷ್ಟಕ್ಕೆ 213 ರನ್ ಗಳ ದೊಡ್ಡ ಗುರಿ ಮುಂದಿಟ್ಟಿತು. ಚೆನ್ನೈ ತಂಡ ಐದು ವಿಕೆಟ್‌ಗೆ 211 ರನ್‌ ಗಳಿಸಿ 2 ರನ್‌ನಿಂದ ಸೋಲು ಕಂಡಿತ್ತು.
 

Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 16 ವರ್ಷಗಳ ಬಳಿಕ ಈ ದಾಖಲೆ ಬರೆದ ಆರ್‌ಸಿಬಿ