Select Your Language

Notifications

webdunia
webdunia
webdunia
webdunia

ಐಪಿಎಲ್ 2022: ರಾಜಸ್ಥಾನ್ ವಿರುದ್ಧ ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿ ಮುಂಬೈ

ಐಪಿಎಲ್ 2022: ರಾಜಸ್ಥಾನ್ ವಿರುದ್ಧ ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿ ಮುಂಬೈ
ಮುಂಬೈ , ಶನಿವಾರ, 30 ಏಪ್ರಿಲ್ 2022 (08:40 IST)
ಮುಂಬೈ: ಐಪಿಎಲ್ 2022 ರಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿರುವ ಮುಂಬೈ ಇಂಡಿಯನ್ಸ್ ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯವಾಡಲಿದೆ.

ಇದುವರೆಗೆ ಆಡಿದ ಎಲ್ಲಾ ಪಂದ್ಯಗಳನ್ನು ಸೋತು ಒತ್ತಡದಲ್ಲಿರುವ ರೋಹಿತ್ ಪಡೆ ಪ್ರತಿಷ್ಠೆ ಉಳಿಸಿಕೊಳ್ಳಲು ಒಂದಾದರೂ ಪಂದ್ಯ ಗೆಲ್ಲಬೇಕಿದೆ. ಆದರೆ ಬ್ಯಾಟಿಂಗ್ ಕೈಕೊಟ್ಟಿರುವುದು ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ.

ಇತ್ತ ರಾಜಸ್ಥಾನ್ ಈಗ ಸತತ ಗೆಲುವಿನಿಂದಾಗಿ ಟಾಪ್ 2 ರಲ್ಲಿ ಸ್ಥಾನ ಪಡೆದಿದ್ದು, ಮುಂಬೈನ ಪ್ರಸಕ್ತ ಫಾರ್ಮ್ ಗಮನಿಸಿದರೆ ಗೆಲುವು ಕಷ್ಟವೇನಲ್ಲ. ಜೋಸ್ ಬಟ್ಲರ್ ರನ್ ಹೊಳೆ ಹರಿಸುತ್ತಿದ್ದು, ಬೌಲರ್ ಗಳೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಮತ್ತೊಂದು ಗೆಲುವಿನೊಂದಿಗೆ ಅಗ್ರಪಟ್ಟಕ್ಕೇರುವ ಉತ್ಸಾಹ ರಾಜಸ್ಥಾನ್ ನದ್ದಾಗಿದೆ. ಈ ಪಂದ್ಯ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಆರ್ ಸಿಬಿಗೆ ಇಂದು ಗುಜರಾತ್ ಕಠಿಣ ಎದುರಾಳಿ