ದುಬೈ: ಐಪಿಎಲ್ 14 ರಲ್ಲಿ ಇಂದು ಎರಡನೆಯ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ಸೆಣಸಾಡಲಿದೆ.
14 ರ ಎರಡನೇ ಭಾಗದಲ್ಲಿ ಮೊದಲ ಗೆಲುವಿಗಾಗಿ ಹಂಬಲಿಸುತ್ತಿರುವ ರೋಹಿತ್ ಬಳಗ ಒಂದೆಡೆಯಾದರೆ, ಇನ್ನು ಒಂದೇ ಒಂದು ಸೋಲು ತಪ್ಪಿಸಿಕೊಳ್ಳುವ ಒತ್ತಡ ಕೆಎಲ್ ರಾಹುಲ್ ಬಳಗದ ಮೇಲೆ.
ಪಂಜಾಬ್ ಕಳೆದ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ಗೆಲುವು ಕಂಡಿತ್ತು. ಮುಂಬೈಗೆ ರೋಹಿತ್ ಶರ್ಮಾ ಬಿಟ್ಟರೆ ಉಳಿದವರು ಯಾರೂ ಬ್ಯಾಟಿಂಗ್ ನಲ್ಲಿ ಕ್ಲಿಕ್ ಆಗದೇ ಇರುವುದು ತಲೆನೋವಾಗಿದೆ. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ರಿಂದ ಇನ್ನೂ ಉತ್ತಮ ಇನಿಂಗ್ಸ್ ಬಂದಿಲ್ಲ. ಆದರೆ ಬೌಲಿಂಗ್ ನಲ್ಲಿ ಮಾತ್ರ ಜಸ್ಪ್ರೀತ್ ಬುಮ್ರಾ ನೇತೃತ್ವದ ಬಳಗ ಪರಿಣಾಮಕಾರಿ ಬೌಲಿಂಗ್ ಮಾಡುತ್ತಿದೆ. ಅತ್ತ ಪಂಜಾಬ್ ಗೆ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ರನ್ ಗಳಿಸಿದರೆ ಉತ್ತಮ ಮೊತ್ತ ಪೇರಿಸಲು ಸಹಾಯವಾಗುತ್ತದೆ. ಆದರೆ ಕೊನೆಯ ಕ್ಷಣದಲ್ಲಿ ಒತ್ತಡ ನಿಭಾಯಿಸುವ ಕಲೆ ರೂಢಿಸಿಕೊಳ್ಳಬೇಕಾಗಿದೆ. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.