Select Your Language

Notifications

webdunia
webdunia
webdunia
webdunia

ಐಪಿಎಲ್ 14: ಮುಂಬೈಗೆ ಗೆಲುವಿನ ಸಮಾಧಾನ

ಐಪಿಎಲ್ 14: ಮುಂಬೈಗೆ ಗೆಲುವಿನ ಸಮಾಧಾನ
ಮುಂಬೈ , ಶುಕ್ರವಾರ, 30 ಏಪ್ರಿಲ್ 2021 (09:10 IST)
ಮುಂಬೈ: ಐಪಿಎಲ್ 14 ರಲ್ಲಿ ಕಳೆದ ಕೆಲವು ಪಂದ್ಯಗಳಿಂದ ಮಂಕಾಗಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ ಗಳ ಗೆಲುವು ಸಾಧಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಸಂಜು ಸ್ಯಾಮ್ಸನ್ 42, ಜೋಸ್ ಬಟ್ಲರ್ 41, ಶಿವಂ ದುಬೆ 35 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈಗೆ ಕ್ವಿಂಟನ್ ಡಿ ಕಾಕ್ ಆಸರೆಯಾದರು. 50 ಎಸೆತಗಳಲ್ಲಿ 70 ರನ್ ಗಳಿಸಿ ಮಿಂಚಿದ ಅವರಿಗೆ 39 ರನ್ ಗಳಿಸಿ ಕೃನಾಲ್ ಪಾಂಡ್ಯ ತಕ್ಕ ಸಾಥ್ ನೀಡಿದರು. ಇದರಿಂದಾಗಿ ಮುಂಬೈ 18.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 172 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಭೀತಿ: ಐಪಿಎಲ್ ನಿಂದ ಹೊರಬಂದ ಅಂಪಾಯರ್