Select Your Language

Notifications

webdunia
webdunia
webdunia
webdunia

ಆರ್ ಸಿಬಿ ತಂಡ ಬೌಲರ್ ಹರ್ಷಲ್ ಪಟೇಲ್ ತಂಗಿ ನಿಧನ

Harshal Patel sister RCB IPL ಐಪಿಎಲ್ ಹರ್ಷಲ್ ಪಟೇಲ್ ಆರ್ ಸಿಬಿ
, ಭಾನುವಾರ, 10 ಏಪ್ರಿಲ್ 2022 (15:08 IST)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ವೇಗಿ ಹರ್ಷಲ್ ಪಟೇಲ್ ಅವರ ಸೋದರಿ ದಿಢೀರ್ ನಿಧನ ಹೊಂದಿದ್ದು, ತಂಡ ಬಯೋ ಬಬಲ್ ತೊರೆದಿದ್ದಾರೆ.

ಪುಣೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ ಸಿಬಿ 7 ವಿಕೆಟ್ ಗೆಲುವು ಸಾಧಿಸಿದ ಬೆನ್ನಲ್ಲೇ ತಂಡಕ್ಕೆ ದೊಡ್ಡ ಆಘಾತದ ಸುದ್ದಿ ಬಂದಿದೆ.

ಹರ್ಷಲ್ ಪಟೇಲ್ ಅವರ ಸೋದರಿ ಮೃತಪಟ್ಟಿದ್ದಾರೆ. ಹೀಗಾಗಿ ಅವರು ನಮ್ಮ ಜೊತೆ ಪುಣೆಯಿಂದ ಮುಂಬೈಗೆ ಬಸ್ ನಲ್ಲಿ ಬರುತ್ತಿಲ್ಲ ಎಂದು ತಂಡ ಹೇಳಿಕೆ ನೀಡಿದೆ.

ಏಪ್ರಿಲ್ 12ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಹರ್ಷಲ್ ಪಟೇಲ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಕಳೆದ ವರ್ಷ ಐಪಿಎಲ್ ಗೆ ಪಾರ್ದಪಣೆ ಮಾಡಿದ ನಂತರ ಹರ್ಷಲ್ ಪಟೇಲ್ ತಂಡದ ಪರ ಈಗಾಗಲೇ 8 ಪಂದ್ಯಗಳನ್ನು ಆಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರವೀಂದ್ರ ಜಡೇಜಾಗೆ ಕ್ಯಾಪ್ಟನ್ ಆಗಲು ನಾಲಾಯಕ್ಕು ಎಂದ ಫ್ಯಾನ್ಸ್