Select Your Language

Notifications

webdunia
webdunia
webdunia
webdunia

ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಅಶ್ವಿನ್ ಗೇ ಗಾಳ ಹಾಕುತ್ತಿರುವ ಡೆಲ್ಲಿ

ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಅಶ್ವಿನ್ ಗೇ ಗಾಳ ಹಾಕುತ್ತಿರುವ ಡೆಲ್ಲಿ
ನವದೆಹಲಿ , ಸೋಮವಾರ, 2 ಸೆಪ್ಟಂಬರ್ 2019 (07:51 IST)
ನವದೆಹಲಿ: ಐಪಿಎಲ್ ನಲ್ಲಿ ಈ ಬಾರಿ ಮತ್ತಷ್ಟು ಸ್ಟಾರ್ ಆಟಗಾರರನ್ನು ತನ್ನತ್ತ ಸೆಳೆದುಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ಗಾಳ ಹಾಕುತ್ತಿದೆ. ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ರನ್ನು ತನ್ನ ತಂಡಕ್ಕೆ ಸೆಳೆಯಲು ಡೆಲ್ಲಿ ಪ್ರಯತ್ನ ನಡೆಸಿದೆ.


ಪಂಜಾಬ್ ತಂಡ ಈ ಬಾರಿ ರವಿಚಂದ್ರನ್ ಅಶ್ವಿನ್ ಗೆ ನಾಯಕತ್ವದಿಂದ ಕೊಕ್ ನೀಡಿ ಕೆಎಲ್ ರಾಹುಲ್ ಗೆ ನಾಯಕನ ಪಟ್ಟ ಕಟ್ಟಲು ತಯಾರಿ ನಡೆಸಿದೆ. ಹೀಗಾಗಿ ಅಶ್ವಿನ್ ರನ್ನು ಕೊಳ್ಳಲು ಡೆಲ್ಲಿ ಆಸಕ್ತಿ ವಹಿಸಿದೆ.

ಡೆಲ್ಲಿ ಸ್ಪಿನ್ ದಾಳಿ ವಿಭಾಗವನ್ನು ಬಲಗೊಳಿಸಲು ಅಶ್ವಿನ್ ರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮಾತುಕತೆ ನಡೆಸಿದೆ. ಈಗ ಮಾತುಕತೆ ಅಂತಿಮ ಹಂತ ತಲುಪಿದ್ದು, ಸಹಿ ಹಾಕುವುದೊಂದೇ ಬಾಕಿ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಲ್ವಾರ್ ನಿಂದ ಮನುಷ್ಯರನ್ನೂ ಕೊಲ್ಲಲು ಗೊತ್ತು: ಭಾರತಕ್ಕೆ ಎಚ್ಚರಿಕೆ ನೀಡಿದ ಪಾಕ್ ಕ್ರಿಕೆಟಿಗ ಜಾವೇದ್ ಮಿಯಾಂದಾದ್