Daily Horoscope

Select Your Language

Notifications

webdunia
webdunia
webdunia
webdunia

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಕೈ ಕೊಟ್ಟ ಟೀಂ ಇಂಡಿಯಾ ಕೋಚ್ ಹುದ್ದೆ ಆಕಾಂಕ್ಷಿ ಮೈಕ್ ಹಸನ್

ಮೈಕ್ ಹಸನ್
ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿದ್ದ ಮೈಕ್ ಹಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಸನ್ ಈಗ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಹುದ್ದೆ ಆಕಾಂಕ್ಷಿಯಾಗಿದ್ದಾರೆ.


ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದವರ ಪೈಕಿ ಮೈಕ್ ಹಸನ್ ಕೂಡಾ ಒಬ್ಬರು. ಟೀಂ ಇಂಡಿಯಾಗೆ ಕೋಚ್ ಆಗಬೇಕಾದರೆ ಐಪಿಎಲ್ ನ ಯಾವುದೇ ತಂಡದ ಜತೆಗೆ ಕೆಲಸ ಮಾಡುತ್ತಿರಬಾರದು. ಹೀಗಾಗಿಯೇ ಮೈಕ್ ಪಂಜಾಬ್ ತಂಡಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಕಿ ಅರ್ಥರ್ ಕೂಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಆ ದೇಶದ ಕ್ರಿಕೆಟ್ ತಂಡವೂ ಹೊಸ ಕೋಚ್ ನ ಹುಡುಕಾಟದಲ್ಲಿದೆ. ಹೀಗಾಗಿ ಯಾವುದಾದರೂ ಒಂದು ತಂಡದ ಕೋಚ್ ಹುದ್ದೆ ಸಿಗಬಹುದೆಂಬ ಭರವಸೆಯಿಂದ ಮೈಕ್ ಪಂಜಾಬ್ ತಂಡಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ವಿಂಡೀಸ್ ಮೊದಲ ಏಕದಿನ ಮಳೆಯಿಂದಾಗಿ ವಾಶ್ ಔಟ್