ಇದೇ ತಿಂಗಳು ಟೀಂ ಇಂಡಿಯಾ ಹೊಸ ಕೋಚ್ ಪಕ್ಕಾ

ಮಂಗಳವಾರ, 6 ಆಗಸ್ಟ್ 2019 (09:45 IST)
ಮುಂಬೈ: ಟೀಂ ಇಂಡಿಯಾಗೆ ಹೊಸ ಕೋಚ್ ಯಾರು ಎಂಬ ಪ್ರಶ್ನೆಗೆ ಆಗಸ್ಟ್ ಮಧ್ಯದಲ್ಲೇ ಉತ್ತರ ಸಿಗಲಿದೆ. ಇದೇ ತಿಂಗಳು ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಬಿಸಿಸಿಐ ಸಿಇಒ ವಿನೋದ್ ರಾಯ್ ಹೇಳಿದ್ದಾರೆ.


ಕೋಚ್ ಆಗಿ ಮತ್ತೆ ರವಿಶಾಸ್ತ್ರಿಯೇ ಮುಂದುವರಿಯಬಹುದು. ಕೊಹ್ಲಿಗೂ ಶಾಸ್ತ್ರಿ ಮೇಲೇ ಹೆಚ್ಚು ಒಲವಿದೆ ಎಂಬಿತ್ಯಾದಿ ಅನುಮಾನಗಳಿಗೆ ವಿನೋದ್ ರಾಯ್ ಉತ್ತರಿಸಿದ್ದಾರೆ.

ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯ ನಿರ್ಧಾರವೇ ಅಂತಿಮವಾಗಲಿದೆ ಎಂದಿದ್ದಾರೆ. ಸದ್ಯದಲ್ಲೇ ಆಕಾಂಕ್ಷಿಗಳ ಶಾರ್ಟ್ ಲಿಸ್ಟ್ ತಯಾರಿಸಿ ಆಯ್ಕೆ ಅಂತಿಮಗೊಳಿಸಲಾಗುವುದು ಎಂದು ವಿನೋದ್ ರಾಯ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆರ್ಟಕಲ್ 370 ರದ್ದು: ಕೇಂದ್ರದ ನಿರ್ಧಾರ ಕೊಂಡಾಡಿದ ಕ್ರಿಕೆಟಿಗರು