Daily Horoscope
✕

ಸಿಎಸ್ ಕೆಗೆ ಮುಂಬೈ ವಿರುದ್ಧ ರೋಚಕ ಗೆಲುವು

Webdunia
ಸೋಮವಾರ, 20 ಸೆಪ್ಟಂಬರ್ 2021 (07:49 IST)
ದುಬೈ: 45 ರನ್ ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈ ಕೊನೆಗೆ ಪಂದ್ಯ ಗೆದ್ದಿದ್ದು ಇತಿಹಾಸ. ಐಪಿಎಲ್ 14 ರ ಎರಡನೇ ಹಂತದ ಮೊದಲ ಪಂದ್ಯವೇ ರೋಚಕ.


ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯವನ್ನು ಚೆನ್ನೈ 20 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಋತುರಾಜ್ ಗಾಯಕ್ ವಾಡ್ 58 ಎಸೆತಗಳಲ್ಲಿ 88 ರನ್ ಗಳಿಸಿದರು. ಇದರಿಂದಾಗಿ ಚೆನ್ನೈ ಗೌರವಯುತ ಮೊತ್ತ ಕಲೆ ಹಾಕಿತು.

ಈ ಮೊತ್ತ ಬೆನ್ನತ್ತಿದ ಮುಂಬೈಗೆ ಚೆನ್ನೈಯ ಸಂಘಟಿತ ಬೌಲಿಂಗ್ ಕಡಿವಾಣ ಹಾಕಿತು.  ಸೌರಬ್ ತಿವಾರಿ ಅಜೇಯ 50 ರನ್ ಗಳಿಸಿದರು. ಮೊಣಕಾಲಿನ ಗಾಯಕ್ಕೊಳಗಾಗಿದ್ದ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿತ್ತು. ಅವರ ಸ್ಥಾನದಲ್ಲಿ ಕಿರನ್ ಪೊಲ್ಲಾರ್ಡ್ ತಂಡ ಮುನ್ನಡೆಸಿದರು. ಅಂತಿಮವಾಗಿ ಮುಂಬೈ 8 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲಷ್ಟೇ ಶಕ್ತವಾಯಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಒಳ್ಳೆದು ಮಾಡು ನಿಕಿ.. ಬೆಂಗಳೂರು ಪರ ಆಡೋದು ಮಾತ್ರವಲ್ಲ, ಕನ್ನಡವನ್ನೂ ಮಾತಾಡ್ತಾರೆ: ಸ್ಮೃತಿ ಮಂಧಾನ ಹೇಗೆ ಮಾತಾಡಿದ್ರು ನೋಡಿ Video

IND vs WI: ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ನಡುವೆ ಇಂದು ಬೆಂಗಳೂರಿನಲ್ಲಿ ಪಂದ್ಯ ನಡೆಯುತ್ತಾ

ಭಾರತ-ಜಿಂಬಾಬ್ವೆ ಮಹಿಳಾ ಕ್ರಿಕೆಟ್ ಕದನ: ಸಮಯ, ಪಿಚ್ ವರದಿ ಹಾಗೂ ನೇರ ಪ್ರಸಾರ ಮಾಹಿತಿ

IND vs WI T20: ಪಂದ್ಯದ ಸಮಯ, ಪಿಚ್ ವರದಿ ಹಾಗೂ ಲೈವ್ ಸ್ಟ್ರೀಮಿಂಗ್ ಮಾಹಿತಿ

IND vs ZIM: ಕ್ಯಾಪ್ಟನ್ ಆಗಿ ಸ್ಮೃತಿ ಮಂಧಾನಗೆ ಮೊದಲ ಸರಣಿ: ಭಾರತ, ಜಿಂಬಾಬ್ವೆ ಸರಣಿ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments