Publish Date: Mon, 27 Jul 2020 (13:01 IST)
Updated Date: Mon, 27 Jul 2020 (13:03 IST)
ಮುಂಬೈ: ಸೆಪ್ಟೆಂಬರ್ ಅಂತ್ಯದಿಂದ ಐಪಿಎಲ್ 13 ಆರಂಭವಾಗಲಿದ್ದು, ಶ್ರೀಮಂತ ಕ್ರೀಡಾಕೂಟದಲ್ಲಿ ಭಾಗಿಯಾಗಲು ಮೊದಲು ಯುಎಇಗೆ ತೆರಳಲಿರುವ ತಂಡ ಯಾವುದು ಗೊತ್ತಾ?
ಎಲ್ಲರಿಗಿಂತ ಮೊದಲು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯುಎಇಗೆ ತೆರಳುವ ಸಾಧ್ಯತೆಯಿದೆ. ಐಪಿಎಲ್ ಗೆ ಮೊದಲು ಎಲ್ಲಾ ತಂಡಗಳು ಯುಎಇನಲ್ಲಿ ತರಬೇತಿ ಕ್ಯಾಂಪ್ ನಡೆಸಲಿವೆ.
ಹೀಗಾಗಿ ಆಗಸ್ಟ್ ಎರಡನೇ ವಾರದಲ್ಲೇ ಸಿಎಸ್ ಕೆ ತಂಡ ಯುಎಇಗೆ ಬಂದಿಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ. ಇದಕ್ಕೂ ಮೊದಲು ಮಾರ್ಚ್ ನಲ್ಲಿ ಭಾರತದಲ್ಲಿ ಐಪಿಎಲ್ ಆರಂಭವಾಗುತ್ತದೆ ಎಂದಾಗಲೂ ಧೋನಿ ನೇತೃತ್ವದ ತಂಡ ಚೆನ್ನೈನಲ್ಲಿ ಕೆಲವು ದಿನ ತರಬೇತಿ ನಡೆಸಿತ್ತು. ಆದರೆ ಈಗ ಬಹಳ ದಿನಗಳ ಬ್ರೇಕ್ ನಂತರ ಕ್ರಿಕೆಟ್ ಆಡುತ್ತಿರುವುದರಿಂದ ಎಲ್ಲಾ ಕ್ರಿಕೆಟಿಗರೂ ತರಬೇತಿಯಲ್ಲಿ ಪಾಲ್ಗೊಳ್ಳಲೇಬೇಕಾಗಿದೆ. ಹೀಗಾಗಿ ಧೋನಿ ಪಡೆ ಎಲ್ಲರಿಗಿಂತ ಮೊದಲು ಯುಎಇ ತಲುಪಲಿದೆ ಎನ್ನಲಾಗಿದೆ.