ಕೊನೆಯ ಬಾಲ್ ನಲ್ಲಿ ಗೆಲುವು: ಧೋನಿ ಪಡೆ ದಾಖಲೆ

Webdunia
ಸೋಮವಾರ, 27 ಸೆಪ್ಟಂಬರ್ 2021 (09:25 IST)
ದುಬೈ: ಟಿ20 ಕ್ರಿಕೆಟ್ ಎಂದರೆ ರೋಚಕತೆಗೆ ಮತ್ತೊಂದು ಹೆಸರು. ಕೊನೆಯ ಓವರ್, ಕೊನೆಯ ಬಾಲ್ ನ ಟೆನ್ಷನ್ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಈ ವಿಚಾರದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸ ದಾಖಲೆಯನ್ನೇ ಬರೆದಿದೆ.


ನಿನ್ನೆ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯವನ್ನು ಕೊನೆಯ ಎಸೆತದಲ್ಲಿ ರೋಚಕವಾಗಿ 2 ವಿಕೆಟ್ ಗಳಿಂದ ಗೆದ್ದ ಚೆನ್ನೈ ಹೊಸ ದಾಖಲೆ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಚೆನ್ನೈ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸುವ ಮೂಲಕ ರೋಚಕ ಗೆಲುವು ಕಂಡಿತು. ರವೀಂದ್ರ ಜಡೇಜಾ ಕೊನೆಯಲ್ಲಿ 8 ಎಸೆತಗಳಿಂದ 22 ರನ್ ಗಳಿಸಿದ್ದು ಪಂದ್ಯದ ತಿರುವಾಗಿತ್ತು.

 ಈ ಮೂಲಕ ಕೊನೆಯ ಎಸೆತದಲ್ಲಿ ಐಪಿಎಲ್ ನಲ್ಲಿ ಅತೀ ಹೆಚ್ಚು ಗೆಲುವು ಕಂಡ ತಂಡ ಎಂಬ ಹೆಗ್ಗಳಿಕೆ ಸಿಎಸ್ ಕೆಯದ್ದಾಯ್ತು. ಧೋನಿ ಪಡೆ ಒಟ್ಟು ಆರು ಬಾರಿ ಈ ಸಾಧನೆ ಮಾಡಿದೆ. ಕೊನೆಯ ಓವರ್ ನ ಒತ್ತಡ ನಿಭಾಯಿಸುವುದರಲ್ಲಿ ಕ್ಯಾಪ್ಟನ್ ಧೋನಿ ಎತ್ತಿದ ಕೈ. ಹೀಗಾಗಿಯೇ ಅವರ ತಂಡವೂ  ಈ ನಿಟ್ಟಿನಲ್ಲಿ ದಾಖಲೆಯನ್ನೇ ಮಾಡಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Rohit Sharma: ಅಯ್ಯೋ.. ನಾನೇ ಕಟ್ಟಿದ ಕೋಟೆ ನನ್ನೆದುರಲ್ಲೇ ಒಡೆದೇ ಹೋಯ್ತಲ್ಲಾ

INDW vs NZW: ಒಂದೇ ದಿನ ಕಿಂಗ್ ಕೊಹ್ಲಿ ಶೂನ್ಯ, ಕ್ವೀನ್ ಸ್ಮೃತಿ ಮಂಧಾನ ಸೆಂಚುರಿ

ಮತ್ತೇ ಕೈಕೊಟ್ಟ ವಿರಾಟ್ ಕೊಹ್ಲಿ, ಕಾಂಗರೂ ನೆಲದಲ್ಲಿ ಟೀಂ ಇಂಡಿಯಾಗೆ ಸೋಲು

Viral Video: ರೋಹಿತ್, ಧೋನಿ ನೆನಪಿಸುವಂತೆ ಬ್ಯಾಟಿಂಗ್ ಮಾಡುತ್ತಾನೆ ಈ ಪುಟ್ಟ ಬಾಲಕ

ICC ಮಹಿಳಾ ಕ್ರಿಕೆಟ್ ವಿಶ್ವಕಪ್: ನಿರ್ಣಾಯಕ ಪಂದ್ಯಾದಲ್ಲಿ ಟಾಸ್ ಸೋತ ಭಾರತ

ಮುಂದಿನ ಸುದ್ದಿ
Show comments