Publish Date: Wed, 30 Sep 2020 (10:20 IST)
Updated Date: Wed, 30 Sep 2020 (10:23 IST)
ದುಬೈ: ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ್ ರಾಯಲ್ಸ್ ಆಟಗಾರ ಸಂಜು ಸ್ಯಾಮ್ಸನ್ ತಮಗೆ ವಿರಾಟ್ ಕೊಹ್ಲಿ ನೀಡಿದ ಅಮೂಲ್ಯ ಸಲಹೆಯೊಂದನ್ನು ನೆನಪಿಸಿಕೊಂಡಿದ್ದಾರೆ.
ಟೀಂ ಇಂಡಿಯಾದಲ್ಲಿದ್ದಾಗ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಕೊಹ್ಲಿ ಜತೆಗೆ ಸಂಜು ಫಿಟ್ನೆಸ್ ಬಗ್ಗೆ ಸಾಕಷ್ಟು ಕೇಳಿದ್ದರಂತೆ. ನೀವು ಹೇಗೆ ಫಿಟ್ನೆಸ್ ಕಾಪಾಡಿಕೊಳ್ಳುತ್ತೀರಿ ಎಂಬ ಬಗ್ಗೆ ಸಾಕಷ್ಟು ಪ್ರಶ್ನೆ ಕೇಳಿದ್ದರಂತೆ. ಇದಕ್ಕೆ ಉತ್ತರಿಸಿದ ಕೊಹ್ಲಿ ‘ನೀನು ಮುಂದೆ ಎಷ್ಟು ವರ್ಷ ಕ್ರಿಕೆಟ್ ಆಡುವೆ?’ ಎಂದು ಪ್ರಶ್ನಿಸಿದ್ದರಂತೆ. ಇದಕ್ಕೆ ಸಂಜು ‘ನನಗೀಗ 25 ವರ್ಷ. ಇನ್ನು 10 ವರ್ಷ ಕ್ರಿಕೆಟ್ ಆಡಬಹುದು’ ಎಂದಿದ್ದರಂತೆ. ‘ಹಾಗಿದ್ದರೆ ಆ 10 ವರ್ಷವನ್ನು ಕೇವಲ ಕ್ರಿಕೆಟ್ ಗಾಗಿ ಮೀಸಲಿಡು. ನಿನ್ನ ಇಷ್ಟದ ಕೇರಳ ಫುಡ್ ನ್ನು 10 ವರ್ಷದ ಬಳಿಕ ಜೀವನ ಇದೆಯಲ್ಲಾ ಆಗ ಸೇವಿಸು. ಈಗ ದೇಹಕ್ಕೆ ಏನು ಬೇಕು ಅದನ್ನು ಮಾತ್ರ ಸೇವಿಸು’ ಎಂದು ಸಲಹೆ ನೀಡಿದ್ದರಂತೆ. ಆ ಸಲಹೆ ನನಗೆ ಉಪಯೋಗವಾಯಿತು ಎಂದು ಸಂಜು ಹೇಳಿಕೊಂಡಿದ್ದಾರೆ.