ದುಬೈ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಿನ್ನೆ ಪಂದ್ಯ ಸೋತಿದ್ದೂ ಅಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಐಯರ್ ದಂಡದ ಬರೆ ಹಾಕಿಸಿಕೊಂಡಿದ್ದಾರೆ.
ಹೈದರಾಬಾದ್ ವಿರುದ್ಧ ನಿಧಾನಗತಿಯ ಓವರ್ ಮಾಡಿದ್ದಕ್ಕೆ ಡೆಲ್ಲಿ ನಾಯಕ ಶ್ರೇಯಸ್ ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಮೊದಲು ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಇದೇ ರೀತಿ ನಿಧಾನಗತಿಯ ಓವರ್ ಗಾಗಿ 12 ಲಕ್ಷ ರೂ. ದಂಡ ಹಾಕಿಸಿಕೊಂಡಿದ್ದರು. ಇದೀಗ ಡೆಲ್ಲಿ ನಾಯಕನ ಸರದಿ.