Publish Date: Sat, 03 Oct 2020 (10:10 IST)
Updated Date: Sat, 03 Oct 2020 (10:12 IST)
ದುಬೈ: ಐಪಿಎಲ್ 13 ಆರಂಭವಾಗಿ ಎರಡು ವಾರ ಕಳೆಯುತ್ತಾ ಬಂದಿದ್ದು, ಇಂದು, ನಾಳೆ ಒಂದೇ ದಿನ ಎರಡು ಪಂದ್ಯ ನಡೆಯಲಿದೆ. ಹೀಗಾಗಿ ಈ ವಾರಂತ್ಯ ವೀಕ್ಷಕರಿಗೆ ಹಬ್ಬವಾಗಲಿದೆ.
ಇಂದು ಮಧ್ಯಾಹ್ನ 3.30 ಕ್ಕೆ ಮೊದಲ ಪಂದ್ಯ ಆರ್ ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಲಿದೆ. ಎರಡನೇ ಪಂದ್ಯ ಸಂಜೆ 7.30 ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕೊತ್ತಾ ನೈಟರ್ ರೈಡರ್ಸ್ ನಡುವೆ ನಡೆಯಲಿದೆ. ನಾಳೆ ಮಧ್ಯಾಹ್ನ 3.30 ಕ್ಕೆ ಮುಂಬೈ ಇಂಡಿಯನ್ಸ್, ಹೈದರಾಬಾದ್ ಮುಖಾಮುಖಿಯಾಗಲಿದ್ದರೆ, ಸಂಜೆ 7.30 ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.
Krishnaveni K
Publish Date: Sat, 03 Oct 2020 (10:10 IST)
Updated Date: Sat, 03 Oct 2020 (10:12 IST)